

ಮೈಸೂರು: ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಜಗನ್ನಾಥ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉದ್ರೋ ಮಾಘೋದಿ ರಾಷ್ಟ್ರೀಯ ನೃತ್ಯ ಉತ್ಸವ-2024ರಲ್ಲಿದಲ್ಲಿ ನಗರದ ಭರತನಾಟ್ಯ ಕಲಾವಿದೆ ಡಾ. ಚೇತನಾ ರಾಧಾಕೃಷ್ಣ ಅವರು ಭಾಗವಹಿಸಿದ್ದರು.
ನೃತ್ಯೋತ್ಸವಾದ ಮೊದಲನೇ ದಿನ ಡಾ. ಚೇತನಾ ರಾಧಾಕೃಷ್ಣ ತಮ್ಮ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿ ಮಾಡಿದರು. ಸಾಂಸ್ಕೃತಿಕ ವೈಭವ, ಧಾರ್ಮಿಕ ನೃತ್ಯಗಳ ಸೂಕ್ಷ್ಮತೆಗಳನ್ನು ನಿರೂಪಿಸಿ, ಭರತನಾಟ್ಯದ ಪ್ರಾಚೀನ ಪದ್ಧತಿಯನ್ನು ಸರಳ ಮನೋಭಾವದಲ್ಲಿ ಪ್ರೇಕ್ಷಕರಿಗೆ ಪರಿಚಯಿಸಿದರು.
ಎರಡನೇ ದಿನ ರವೀಂದ್ರನಾಥ ಟ್ಯಾಗೋರ್ ಅವರ ಕೃತಿ ಭಾನು ಶಿಂಗರ ಪದಭೋಲಿಯಲ್ಲಿ ರಾಧೆಯಾಗಿ ಅಭಿನಯಿಸಿ ನೃತ್ಯ ರೂಪಕದ ರಸ ನಿಷ್ಪತ್ತಿಗೆ ಕಾರಣರಾದರು.