

ವಿಜಯವಾಣಿ ಸುದ್ದಿಜಾಲ ಧಾರವಾಡ:
ಪ್ರಸಕ್ತ ಸಾಲಿನ ಕೃಷಿ ಮೇಳದಲ್ಲಿಡಾ. ಚನ್ನವೀರ ಕಣವಿ ಉತ್ತಮ ಕನ್ನಡ ಕೃಷಿ ಲೇಖನ ಪ್ರಶಸ್ತಿ'ಗೆ ಅರ್ಜಿ ಆಹ್ವಾನಿಸಲಾಗಿದೆ. ಲೇಖನ ರೈತ ಸಮುದಾಯಕ್ಕೆ ಸೂರ್ತಿದಾಯವಾಗುವ ಪ್ರಚಲಿತ ನಿಯತಕಾಲಿಕೆಯಲ್ಲಿ 2023ರ ಜು. 1ರಿಂದ 2024ರ ಜು. 31ರೊಳಗೆ ಪ್ರಕಟವಾಗಿರಬೇಕು. ಲೇಖನದ 4 ಝರಾಕ್ಸ್ ಪ್ರತಿಗಳನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ- 580 005 ವಿಳಾಸಕ್ಕೆ ಕಳುಹಿಸಬೇಕು. ಅಥವಾ ಇ ಮೇಲ್ಗೆ de@uasd.in ಆ. 26ರೊಳಗೆ ಕಳುಹಿಸಬೇಕು. ಕೃಷಿ ವಿಶ್ವವಿದ್ಯಾಲಯದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಪ್ರಕಟಣೆ ತಿಳಿಸಿದೆ.