ಪಟ್ಟದ್ದೇವರ ಸಂಘಕ್ಕೆ ರು ೬೭.೩೪ ಲಕ್ಷ ನಿವ್ವಳ ಲಾಭ

22blk1
ಭಾಲ್ಕಿಯ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಂಘದ ೨೧ನೆಯ ವಾರ್ಷಿಕ ಮಹಾಸಭೆಯಲ್ಲಿ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ಶ್ರೀ ಗುರುಬಸವ ಪಟ್ಟದ್ದೇವರು, ಡಿ.ಕೆ.ಸಿದ್ರಾಮ, ಜಯರಾಜ ಖಂಡ್ರೆ, ಶರಣಪ್ಪ ಬಿರಾದಾರ್, ರಾಜಶೇಖರ ಅಷ್ಟೂರೆ, ಗಣಪತಿ ಬಾವುಗೆ ಇತರರಿದ್ದರು.
Published on

ಭಾಲ್ಕಿ: ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಂಘವು ೨೦೨೩-೨೪ನೇ ಸಾಲಿನಲ್ಲಿ ೫೫೭ ಕೋಟಿ ರೂ ವಾರ್ಷಿಕ ವಹಿವಾಟು ನಡೆಸುವುದರ ಜತೆಗೆ ೬೭.೩೪ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಕೆ.ಸಿದ್ರಾಮ ಹೇಳಿದರು.

ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ೨೧ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ೫೫ ಕೋಟಿ ರೂ. ಠೇವಣಿ ಇದ್ದು, ೫೪ ಕೋಟಿ ರೂ. ಸಾಲ ನೀಡಲಾಗಿದ್ದು, ಜಿಲ್ಲೆಯ ಮೂರು ಶಾಖೆಗಳು ಸೇರಿ ಸುಮಾರು ೧೨ ಕೋಟಿ ರೂ. ಬಂಗಾರದ ಒಡೆವೆಗಳ ಮೇಲೆ ಸಾಲ ನೀಡಲಾಗಿದೆ. ಶೇ. ೯೫ರಷ್ಟು ಸಾಲ ವಸೂಲಾತಿ ಇದೆ. ಉಳಿದ ಶೇ.೫ರಷ್ಟು ಸಾಲ ವಸೂಲಿಗೂ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಕಾಯಕ ತತ್ವ ಸಮೃದ್ಧಿಯತ್ತ ಕೊಂಡೊಯ್ಯುತ್ತದೆ. ಗ್ರಾಹಕರ ವಿಶ್ವಾಸ, ಆಡಳಿತ ಮಂಡಳಿಯ ನಿಸ್ವಾರ್ಥ ಕಾಯಕದ ಪರಿಣಾಮ ಸಂಘ ಪ್ರಗತಿಯತ್ತ ದಿಟ್ಟ ಹೆಜ್ಜೆಯಿರಿಸಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ವ್ಯವಸ್ಥಾಪಕ ಗಣಪತಿ ಬಾವುಗೆ ವಾರ್ಷಿಕ ವರದಿ ಮಂಡಿಸಿದರು. ಸಂಘದ ಬೀದರ್ ಶಾಖೆಯ ಅಧ್ಯಕ್ಷ ಜಯರಾಜ ಖಂಡ್ರೆ, ಔರಾದ್ ಶಾಖೆಯ ಅಧ್ಯಕ್ಷ ರಾಜಶೇಖರ ಅಷ್ಟೂರೆ, ನಿರ್ದೇಶಕರಾದ ಬಾಬುರಾವ ಜಲ್ದೆ, ಶರದ ಸಿರ್ಸೆ, ರೇಖಾ ಮಹಾಜನ, ಶಶಿಕಲಾ ಎಲ್., ಡಾ.ಮಲ್ಲಿಕಾರ್ಜುನ ಬುಕ್ಕಾ, ಜಗದೇವಿ ಶಿವರಾಜ ಮದಕಟ್ಟೆ, ರವೀಂದ್ರ ಮಿಸೆ, ಮನ್ಮಥ ಹುಗ್ಗೆ, ಪ್ರಕಾಶ ಘುಳೆ, ಚಂದ್ರಕಾಂತ ನಿರ್ಮಳೆ, ವೈಜಿನಾಥ ಪಂಚಾಳ, ನಾಗಪ್ಪ ಮೇತ್ರೆ, ಸುನೀಲ ದೇಶಮುಖ, ಬಂಡೆಪ್ಪ ಕಂಟೆ, ಹಿರಿಯ ಸಲಹೆಗಾರ ಚಂದ್ರಶೇಖರ ಪಾಟೀಲ್ ಇದ್ದರು.

ಸಂಘದ ಉಪಾಧ್ಯಕ್ಷ ಶರಣಪ್ಪ ಬಿರಾದಾರ್ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ನಿರ್ದೇಶಕ ಅನಿಲ ಹಾಲಕುಡೆ ವಂದಿಸಿದರು.

ಕಮಲನಗರ, ಬಸವಕಲ್ಯಾಣದಲ್ಲಿ ಸಂಘದ ಶಾಖೆ: ಡಾ.ಚನ್ನಬಸವ ಪಟ್ಟದ್ದೇವರು ಸಂಘ ಕರಡ್ಯಾಳ, ಔರಾದ್ ಮತ್ತು ಬೀದರ್‌ನಲ್ಲಿ ಶಾಖೆ ಹೊಂದಿದ್ದು ಇನ್ನೂ ಜಿಲ್ಲೆಯ ವಿವಿಧೆಡೆ ಸಂಘದ ಶಾಖೆ ತೆರೆಯುವಂತೆ ಬೇಡಿಕೆ ಇದ್ದು, ಮುಂಬರುವ ೨೦೨೫ರ ಜನವರಿಯಲ್ಲಿ ಕಮಲನಗರ ಮತ್ತು ಬಸವಕಲ್ಯಾಣದಲ್ಲಿ ಶಾಖೆ ತೆರೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಡಿ.ಕೆ.ಸಿದ್ರಾಮ ತಿಳಿಸಿದರು.

ಉತ್ತಮ ಗ್ರಾಹಕರಿಗೆ ಸನ್ಮಾನ: ಸಕಾಲಕ್ಕೆ ಸಾಲ ಮರುಪಾವತಿಸಿ ಉತ್ತಮ ಗ್ರಾಹಕರಾದ ಬಲಭೀಮಯ್ಯ ಸ್ವಾಮಿ, ಶಿವರಾಜ ಸಾವಳೆ, ಪ್ರಭಾಕರ ಹಾಳೆ, ಎಂ.ಡಿ.ಫಾರುಖ್ ಹುಸೇನ್, ಬಸವರಾಜ ಚನಶೆಟ್ಟೆ, ಸುನಿಲಕುಮಾರ ಬಿರಾದಾರ್, ಲಕ್ಷ್ಮಣ ರಾಠೋಡ, ಖಲೀಲ್ ಶರಿಫೋದ್ದಿನ್, ರಾಜಕುಮಾರ ಘೋಡಕೆ, ವಿಶ್ವನಾಥ ಹೇಡೆ ಮತ್ತು ಶಿವರಾಜ ಸೋನಾರ ಅವರನ್ನು ಸನ್ಮಾನಿಸಲಾಯಿತು.

ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಕೃಷಿಕರ, ಬಡ ಜನರ, ದುರ್ಬಲ ವರ್ಗದವರ ಆರ್ಥಿಕ ಪ್ರಗತಿಗಾಗಿ ಸಂಘ ತೆರೆದಿದ್ದು, ಅವರ ಆಶಯದಂತೆ ಸಂಘ ಕರ್ತವ್ಯ ನಿರ್ವಹಿಸುತ್ತಿದೆ.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net