ಹುಮನಾಬಾದ್‌ನಲ್ಲಿ ಕಾಂಗ್ರೆಸಿಗರ ಸಂಭ್ರಮಾಚರಣೆ

7 HBD 1
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್ ಸತತ ಎರಡನೇ ಬಾರಿ ಜಯ ಗಳಿಸಿದ್ದರಿಂದ ಹುಮನಾಬಾದ್‌ನಲ್ಲಿ ಶುಕ್ರವಾರ ಮುಖಂಡರು, ಕಾರ್ಯಕರ್ತರು ಸಂಭ್ರಮಿಸಿದರು. ಅಫ್ಸರ್‌ಮಿಯಾ, ಮಹೇಶ ಅಗಡಿ, ದತ್ತಕುಮಾರ ಚಿದ್ರಿ, ಅಶೋಕ ಸೊಂಡೆ, ಅಶೋಕ ಚಳಕಾಪುರೆ, ಧರ್ಮರೆಡ್ಡಿ, ನರೇಶ ಚಟ್ಟಿ, ಸೈಯದ್ ಯಾಸೀನ್ ಅಲಿ, ವಿಜಯಕುಮಾರ ಶಿವಪುರ ಇತರರಿದ್ದರು.
Published on

ಹುಮನಾಬಾದ್: ಈಶಾನ್ಯ ಪದವೀಧರ ಕ್ಷೇತ್ರದ ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದರಿಂದ ಶುಕ್ರವಾರ ಪಟ್ಟಣ ಸೇರಿ ವಿವಿಧಡೆ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಿಸಿದರು.

ಮಾಜಿ ಸಚಿವ ರಾಜಶೇಖರ ಪಾಟೀಲ್ ನಿವಾಸದಲ್ಲಿ ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡ ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಅಫ್ಸರ್‌ಮಿಯಾ, ಪ್ರಮುಖರಾದ ಮಹೇಶ ಅಗಡಿ, ದತ್ತಕುಮಾರ ಚಿದ್ರಿ, ಅಶೋಕ ಸೊಂಡೆ, ಅಶೋಕ ಚಳಕಾಪುರೆ, ಧರ್ಮರೆಡ್ಡಿ, ನರೇಶ ಚಟ್ಟಿ, ಸೈಯದ್ ಯಾಸೀನ್ ಅಲಿ, ಹಣಮಂತರಾವ ಕಾಂಬಳೆ, ವಿಜಯಕುಮಾರ ಶಿವಪುರ, ದತ್ತು ಪರೀಟ್, ವೈಜಿನಾಥ, ಜಗನ್ನಾಥ ನೌಲೆ, ಪ್ರಕಾಶ ತಾಳಮಡಗಿ, ಬಂಡೆಪ್ಪ ಜಮಾದಾರ ಇತರರಿದ್ದರು.

ಹಳ್ಳಿಖೇಡ(ಬಿ), ಚಿಟಗುಪ್ಪದಲ್ಲೂ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net