ಪಶ್ಚಿಮ ವಲಯ ಐಜಿಪಿಯಾಗಿ ಡಾ.ಚಂದ್ರಗುಪ್ತ

ssss
Published on

ಮಂಗಳೂರು: ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ(ಐಜಿಪಿ)ರಾಗಿ ಡಾ.ಚಂದ್ರಗುಪ್ತ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದುವರೆಗೆ ಕಾರ್ಯ ನಿರ್ವಹಿಸುತ್ತಿದ್ದ ದೇವಜ್ಯೋತಿ ರೇ ಅವರನ್ನು ಮಾನವ ಹಕ್ಕುಗಳು ಮತ್ತು ಕುಂದು ಕೊರತೆ ವಿಭಾಗದ ಐಜಿಪಿಯಾಗಿ ನೇಮಕಗೊಳಿಸಲಾಗಿದೆ. ಚಂದ್ರಗುಪ್ತ ಅವರು ಮೈಸೂರು ನಗರದ ಪೊಲೀಸ್ ಆಯುಕ್ತ ಹಾಗೂ ಡಿಐಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು 2006ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net