ಬೇಂದ್ರೆ ಸಾಹಿತ್ಯದಲ್ಲಿ ಜನರ ಧ್ವನಿ

0602klb07
Published on

ಕಲಬುರಗಿ: ಬದುಕಿನಲ್ಲಿ ಎದುರಾಗುವ ಕಷ್ಟಗಳೊಂದಿಗೆ ಚೆನ್ನಾಗಿ ಬೆಂದರೆ ಮಾತ್ರ ಬೇಂದ್ರೆ ಆಗಲು ಸಾಧ್ಯ ಎಂದು ಶ್ರೀನಿವಾಸ ಸರಡಗಿಯ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ಹೇಳಿದರು.

ನಗರದ ಕಲಾ ಮಂಡಲದಲ್ಲಿ ಕರವೇ (ಕಾವಲುಪಡೆ)ಯಿಂದ ಸೋಮವಾರ ಸಂಜೆ ಏರ್ಪಡಿಸಿದ್ದ ವರಕವಿ ದ.ರಾ.ಬೇಂದ್ರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಇಳಿದು ಬಾ ತಾಯಿ, ಇಳಿದು ಬಾ ಎಂದು ಬೇಂದ್ರೆ ಅವರು ಭಾರತದಲ್ಲಿ ಬರ ಆವರಿಸಿದಾಗ ಹಾಡನ್ನು ಹಾಡಿ ಮಳೆಯನ್ನು ಆಹ್ವಾನಿಸಿದ್ದರು. ನೀ ಹಿಂಗ ನೋಡಬ್ಯಾಡ ನನ್ನ ಎಂದು ಹಾಡಿದ ಹಾಡು ಪ್ರತಿಯೊಬ್ಬರ ಧ್ವನಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ ಮಾತನಾಡಿ, ದ.ರಾ.ಬೇಂದ್ರೆ ಅಂಬಿಕಾತನಯದತ್ತ ಕಾವ್ಯನಾಮದಿಂದ ಅನೇಕ ಕವನ ಸಂಕಲನ ರಚಿಸಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಸಾಹಿತ್ಯದ ಓದು ಬದುಕಿನಲ್ಲಿ ಚೈತನ್ಯ ತುಂಬುತ್ತದೆ. ಜೀವನದಲ್ಲಿ ಕಷ್ಟ ದೂರ ಮಾಡುವ ಶಕ್ತಿ ಬೇಂದ್ರ ಸಾಹಿತ್ಯಕ್ಕಿದೆ ಎಂದು ಬಣ್ಣಿಸಿದರು.

ಹಿರಿಯ ಸಾಹಿತಿ ಡಾ.ರಾಜಶೇಖರ ಮಾಂಗ್ ಅತಿಥಿ ಉಪನ್ಯಾಸ ನೀಡಿದರು. ಎ.ಕೆ.ರಾಮೇಶ್ವರ, ಜಗನ್ನಾಥ ತರನಳ್ಳಿ, ಮಮತಾ ಜಾನೆ, ಲಕ್ಷ್ಮೀಕಾಂತ ರ‍್ಯಾಕಾ, ಶಾಹೀನ ಬೇಗಂ ಅವರಿಗೆ ಬೇಂದ್ರೆ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಪ್ರಮುಖರಾದ ಸಚಿನ್ ಫರತಾಬಾದ್, ಮನೋಹರ ಪೊದ್ದಾರ, ಎಂ.ಡಿ.ಸಿದ್ದಿಕಿ, ಜಗನ್ನಾಥ ಸೂರ್ಯವಂಶಿ, ಪ್ರಹ್ಲಾದ್ ಹಡಗಿಲಕರ್, ಅರವಿಂದ ನಾಟೀಕಾರ, ಕಾಶಿ ಗೌಳಿ, ಉಮಾಕಾಂತ ನಾಟೀಕಾರ, ಮಧುಕರ ಕಾಂಬಳೆ, ಅನೀಲ ಡೊಂಗರಗಾಂವ, ಕವಿನ ನಾಟೀಕಾರ ಇತರರಿದ್ದರು. ವೀರಭದ್ರಪ್ಪ ಅರಕೇರಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net