ದೇಶದ ಅಭಿವೃೃದ್ಧಿಗೆ ಮಹತ್ವದ ಹೆಜ್ಜೆ

dr.basavaraj koppal bjp leader one nation one election
Published on

ಕೊಪ್ಪಳ: ಒಂದು ರಾಷ್ಟ್ರ ಒಂದು ಚುನಾವಣೆ ವಿಷಯ ಜಾರಿಗೆ ತರವು ಮೂಲಕ ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತಡೆ ನಡೆದುಕೊಂಡಿದ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ತಿಳಿಸಿದ್ದಾರೆ.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂಡ್​ ನೇತೃತ್ವದ ಉನ್ನತ ಸಮಿತಿ ಈ ಬಗ್ಗೆ ವರದಿ ಸಲ್ಲಿಸಿದೆ. ವರದಿ ಆಧರಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಅನುಷ್ಠಾನಕ್ಕೆ ಒಪ್ಪಿಗೆ ನೀಡಿದೆ. ಈ ಮೂಲಕ ಐತಿಹಾಸಿಕ ನಿರ್ಧಾರಕ್ಕೆ ನಾಂದಿ ಹಾಡಿದೆ. ಇದು ರಾಷ್ಟ್ರ ಅಭಿವೃದ್ಧಿ ಸಂಕೇತ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಸಮಯ ಮತ್ತು ವೆಚ್ಚ ಉಳಿತಾಯವಾಗಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ನಮ್ಮ ದೇಶದಲ್ಲಿ ಈಗಿರುವ ಹಲವು ಅಡೆತಡೆಗಳನ್ನು ಕಡಿಮೆ ಮಾಡಲಿದೆ. ಮಾನವ ಸಂಪನ್ಮೂಲಗಳ ಸದ್ಬಳಕೆ ಸಾಧ್ಯವಾಗಲಿದ್ದು, ಚುನಾವಣಾ ವೆಚ್ಚ ಕಡಿಮೆಯಾಗಲಿದೆ. ದೇಶದ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net