ಡಾ.ಬಸವಲಿಂಗ ಪಟ್ಟದ್ದೇವರ ಸೇವೆ ಅನನ್ಯ

21ard02
ಔರಾದ್ ತಾಲೂಕಿನ ಸಂತಪುರ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಜನ್ಮದಿನದ ನಿಮಿತ್ತ ಬುಧವಾರ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳನ್ನು ಸನ್ಮಾನಿಸಲಾಯಿತು. ಪಿಎಸ್‌ಐ ನಂದಕುಮಾರ ಮುಳೆ, ಪ್ರಾಂಶಪಾಲ ನವೀಲಕುಮಾರ ಉತ್ಕಾರ್, ಗುರುಪ್ರೀತ್ ಕೌರ್, ಸುನೀಲಕುಮಾರ ಕೋರೆ, ಮೀನಾಕ್ಷಿ ಇತರರಿದ್ದರು.
Published on

ಔರಾದ್: ಗ್ರಾಮೀಣ ಭಾಗದ ಮಕ್ಕಳ ಗುಣಮಟ್ಟದ ಶಿಕ್ಷಣ ಮತ್ತು ಅವರ ಸಂಸ್ಕಾರಯುತ ಬಾಳಿಗೆ ಬೆಳಕಾಗಿರುವ ಭಾಲ್ಕಿ ಹಿರೇಮಠದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸೇವೆ ಅನನ್ಯವಾಗಿದೆ ಎಂದು ಸಂತಪುರ ಪೊಲೀಸ್ ಠಾಣೆಯ ಪಿಎಸ್‌ಐ ನಂದಕುಮಾರ ಮುಳೆ ಹೇಳಿದರು.

ಸಂತಪುರ ಸಿದ್ಧರಾಮೇಶ್ವರ ಕಾಲೇಜು ಹಾಗು ಸ್ಥಳೀಯ ಪೊಲೀಸ್ ಠಾಣೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ೭೪ನೇ ಜನ್ಮದಿನ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಮತ್ತು ಅನಾಥ ಮಕ್ಕಳ ಪಾಲನೆ ಪೋಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಕೊಡುಗೆ ಅಪಾರ ಎಂದು ಹೇಳಿದರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಶ್ರೀಗಳು ತ್ರಿವಿಧ ದಾಸೋಹಗಳಲ್ಲಿ ಎತ್ತಿದ್ದ ಕೈಯಾಗಿದೆ. ಅವರ ಆದರ್ಶಗಳನ್ನು ಎಲ್ಲರೂ ಪೂಜಿಸಿ ಪಾಲನೆ ಮಾಡಬೇಕು ಎಂದರು.

ಮಹಿಳಾ ಪೇದೆ ಮೀನಾಕ್ಷಿ ನಾಗೂರಕರ ಮಾತನಾಡಿದರು. ಅನುಭವ ಮಂಟಪ ಗುರುಕುಲ್ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯೆ ಗುರಪ್ರೀತ್ ಕೌರ್, ಸುನೀಲಕುಮಾರ ಕೋರೆ, ಶೈಲಜಾ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗುನ್ನಳ್ಳಿಕರ್, ಅಶ್ವಿನಿ ಪಾಟೀಲ್, ನಿರ್ಮಲಾ ಜಮಾದಾರ, ರಾಜಕುಮಾರ ಹಳ್ಳಿಕರ್, ಸುಧೀರ ಆಲೂರೆ, ಜಿತೇಂದ್ರ ಡಿಗ್ಗಿ, ಸಂತೋಷ ಧೂಳಗಂಡೆ ಇತರರಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಂಕಿತಾ ರಾಜಕುಮಾರ, ಕೀರ್ತನಾ ಅನಿಲಕುಮಾರ, ಸುಧಾರಾಣಿ ಸಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net