ಶಿಕ್ಷಣಕ್ಕೆ ಒತ್ತು ನೀಡಿದ ಡಾ.ಬಾಲಗಂಗಧರನಾಥ ಶ್ರೀಗಳು

24kdr1.
Published on

ಕಡೂರು: ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಬಡವರು, ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀಗುಣನಾಥ ಸ್ವಾಮೀಜಿ ಹೇಳಿದರು.

ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸಿಬಿಎಸ್‌ಇ ಶಿಕ್ಷಣ ಆರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, ನಮ್ಮ ಹಿರಿಯ ಗುರುಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಿ ಬಡವರು, ರೈತರ ಮಕ್ಕಳು ಸಹ ವಿಜ್ಞಾನ ಕಲಿಯುವ ಮೂಲಕ ವಿಜ್ಞಾನಿಗಳಾಗಬೇಕು ಎಂಬ ಆಸೆಯಿಂದ ಒಂದೇ ಬಾರಿಗೆ 30ಕ್ಕೂ ಹೆಚ್ಚಿನ ವಿಜ್ಞಾನ(ಪಿಯು) ಕಾಲೇಜುಗಳನ್ನು ತೆರೆಯಲಾಯಿತು. ಇದರಲ್ಲಿ ಕಡೂರು ಬಿಜಿಎಸ್ ವಿಜ್ಞಾನ ಕಾಲೇಜು ಸಹ ಒಂದು. ಶ್ರೀಗಳಿಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬುಲ್‌ಕಲಾಂ ನೀಡಿದ ಒಂದು ಸಲಹೆಯಿಂದ ಹಿರಿಯ ಶ್ರೀಗಳು ವಿಜ್ಞಾನ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು.

ಸಂಸ್ಥೆ ಪ್ರಾಚಾರ್ಯರಾದ ಎಚ್.ಎಸ್.ಸುಮಿತ್ರಿ ವಾರ್ಷಿಕ ವರದಿ ವಾಚಿಸಿದರು. ಪಿಯು ಉಪನಿರ್ದೇಶಕ ಪುಟ್ಟನಾಯ್ಕ , ಡಿಡಿಪಿಐ ಉಪ ನಿರ್ದೇಶಕ ಜಿ.ಕೆ.ಪುಟ್ಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧರಾಜನಾಯ್ಕ, ಇಂಜಿನಿಯರ್ ತರುಣ್ ಶಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net