

ಚಿಕ್ಕಮಗಳೂರು: ಪೌರಕಾರ್ವಿುಕರು ಹಾಗೂ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರನ್ವಯ ಜಿಲ್ಲಾ ಜಾಗೃತಿ ಸಮಿತಿ ತ್ರೖೆಮಾಸಿಕ ಸಭೆಯಲ್ಲಿ ಮಾತನಾಡಿದರು.
ಮ್ಯಾನುಯಲ್ ಸ್ಕ್ಯಾವೆಂಜರ್ಸ್ ವೃತ್ತಿ ನಿಷೇಧಕ್ಕೆ ಸಂಬಂಧಿಸಿ ಪಟ್ಟಣ, ಪುರಸಭೆ ಹಾಗೂ ಗ್ರಾಪಂ ಮಟ್ಟದಲ್ಲಿ ಜನಜಾಗೃತಿ ಕ್ರಮ ಕೈಗೊಂಡು ಅರಿವು ಮೂಡಿಸಬೇಕಿದೆ. ಪೌರಕಾರ್ವಿುಕರು ಸಮೃದ್ಧ ಜೀವನ ನಡೆಸಲಿಕ್ಕಾಗಿ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ವಿುಸಲಾಗುತ್ತಿದ್ದು ಗುಣಮಟ್ಟ ಕಾಪಾಡುವಂತೆ ತಿಳಿಸಿದರು.
ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಪೌರ ಕಾರ್ವಿುಕರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಅವರ ಮನೆಗಳಿಗೆ ಹೋಗಿ ಕಷ್ಟ-ಸುಖ ತಿಳಿಯಬೇಕು. ಪ್ರತಿ ವರ್ಷ ಸರ್ಕಾರದಿಂದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ. ಸೌಲಭ್ಯ ದುರ್ಬಳಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು. ಪೌರರ್ವಿುಕರಿಗೆ ಗುರುತಿನ ಚೀಟಿ ನೀಡಿ ಕಾರ್ವಿುಕರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊನೆಗೊಳಿಸಬೇಕು. ವಿವಿಧ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.