

ಯರಗಟ್ಟಿ: ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎಂಬ ಸಂದೇಶ ಸಾರಿದ ಡಾ.ಬಾಬು ಜಗಜೀವನರಾಂ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 118ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಲಿತ ಮುಖಂಡ ಭಾಸ್ಕರ ಹಿರೇಮೇತ್ರಿ ಮಾತನಾಡಿ, ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು. ಜತೆಗೆ ಕಾರ್ಮಿಕರ ಏಳಿಗೆಗೆ ಶ್ರಮಿಸಿದ ಡಾ.ಜಗಜೀವನ ರಾಂ ಹಸಿರು ಕ್ರಾಂತಿ ಆರಂಭಿಸಿದರು ಎಂದರು.
ಪಿಎಸ್‌ಐ ಎಲ್.ಬಿ.ಮಾಳಿ, ಪಪಂ ಮುಖ್ಯಾಧಿಕಾರಿ ಡಿ.ಎನ್.ತಹಸೀಲ್ದಾರ್,ವೈದ್ಯಾಧಿಕಾರಿ ಬಿ.ಎಸ್.ಬಳ್ಳುರ, ಪಶು ವೈದ್ಯಾಧಿಕಾರಿ ಎಂ.ವಿ.ಪಾಟೀಲ, ಶಿರಸ್ತೆದಾರ ಎಸ್.ಬಿ.ಕುಲರ್ಕಣಿ, ಉಪ ತಹಸೀಲ್ದಾರ್ ಸಂತೋಷ ಜಾಧವ, ಮುಖಂಡರಾದ ಲಕ್ಕಪ್ಪ ಹುಣಶಿಕಟ್ಟಿ, ಚಿದಂಬರ ಕಟ್ಟಮನಿ, ಸಂತೋಷ ಹುಣಶಿಕಟ್ಟಿ, ವಿಜಯ ಆರೇನ್ನವರ, ನವೀನ ಹುಣಶಿಕಟ್ಟಿ ಇತರರಿದ್ದರು.