ಡಾ. ಬಾಬು ಜಗಜೀವನ್ ರಾಮ್ ಪುತ್ಥಳಿಗೆ ಮಾರ್ಲಾಪಣೆ

RAICHUR
RAICHUR
Published on

 ರಾಯಚೂರು ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವರಾಂ ಪುಣ್ಯ ಸ್ಮರಣೆ ಆಂಗವಾಗಿ ಭಾನುವಾರ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು ನಗರದ ಸ್ಟೇಷನ್ ಬಳಿಯ ಡಾ.ಬಾಬು ಜಗಜೀವನರಾಂ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು.

ನಂತರ ಮಾತನಾಡಿ, ದೇಶದ ಆಹಾರ ಕೊರತೆಯನ್ನು ನೀಗಿಸುವ ಮೂಲಕ ಡಾ.ಬಾಬುಜಗಜೀನರಾಂ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ. ಅವರ ರಾಯಚೂರಿಗೆ ಆಗಮಿಸಿ ಕೃಷಿ ಇಂಜಿನಿಯರಿಂಗ್ ಕಾಲೇಜಿಗೆ ಚಾಲನೆ ನೀಡಿದ್ದರು. ಅವರ ದೂರದೃಷ್ಟಿ, ಸರಳತೆಗಳು ಎಲ್ಲರಿಗೂ ಮಾರ್ಗದರ್ಶನವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅವರ ಅವರ ಆದರ್ಶ, ಚಿಂತನೆಗಳ ಜಾರಿಗೊಳಿಸಲು ಶ್ರಮಿಸುತ್ತಿದೆ ಎಂದರು.

ಈ ಸಂದರ್ಬದಲ್ಲಿ ಪಾಲಿಕೆ ಸದಸ್ಯ ಜಯಣ್ಣ, ಬಿ.ರಮೇಶ, ಕೆ.ಶಾಂತಪ್ಪ, ಜಿಲ್ಲಾಧಿಕಾರಿ ನಿತೀಶಕುಮಾರ, ಪಾಲಿಕೆ ಆಯುಕ್ತ ಜುಬೀನ್ ಮಹೋಪಾತ್ರ, ಜಿ.ಶಿವಮೂರ್ತಿ,ಅಮರೇಗೌಡ ಹಂಚಿನಾಳ, ರಾಜು ಸಂಗಟಿ, ವಿಶ್ವನಾಥ ಪಟ್ಟಿ, ಮರಿಸ್ವಾಮಿ, ನರಸಪ್ಪ ದಂಡೋರ ಸೇರಿ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net