‘ಮೂಲ್ಕಿ ಪಂಡಿತ’ ಬಪ್ಪನಾಡು ಡಾ.ಬಿ.ಎಚ್.ರಾಘವ ರಾವ್ ವಿಧಿವಶ

web - raghava rao 1
ಬಪ್ಪನಾಡು ಡಾ.ಬಿ.ಎಚ್.ರಾಘವ ರಾವ್
Published on

ಮೂಲ್ಕಿ: ಇಲ್ಲಿಗೆ ಸಮೀಪದ ಬಪ್ಪನಾಡು ನಿವಾಸಿ ಡಾ.ಬಿ.ಎಚ್.ರಾಘವ ರಾವ್(77) ಸ್ವಗೃಹದಲ್ಲಿ ಬುಧವಾರ ವಿಧಿವಶರಾದರು.

ಕಳದ 50 ವರ್ಷಗಳಿಂದ ಬಪ್ಪನಾಡಿನಲ್ಲಿ ನಾರಾಯಣ ವೈದ್ಯಾಶ್ರಮದ ಮೂಲಕ ಅನಾರೋಗ್ಯ ಪೀಡಿತರಿಗೆ ಔಷಧಿ ನೀಡಿ ಮೂಲ್ಕಿ ಪರಿಸರದಲ್ಲಿ ‘ಮೂಲ್ಕಿ ಪಂಡಿತರು’ ಎಂದೆ ಹೆಸರುವಾಸಿಯಾಗಿದ್ದರು.

ಅವರು ಮೂಲ್ಕಿ ಪರಿಸರದ ವಿವಿಧ ಸಂಘ-ಸಂಸ್ಥೆಗಳಲ್ಲಿ, ಬಪ್ಪನಾಡು ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ, ಸಾರ್ವಜನಿಕ ಹಿಂದು ರುದ್ರಭೂಮಿ ಸಮಿತಿಯಲ್ಲಿ ಹಾಗೂ ಹಿಂದಿನ ಆಯೋಧ್ಯೆ ಶ್ರೀರಾಮ ಜನ್ಮಭೂಮಿ ರಥಯಾತ್ರೆ ಆಂದೋಲನದಲ್ಲಿ, ಮೂಲ್ಕಿ ವಿಜಯ ಕಾಲೇಜು ಹಳೇ ವಿದ್ಯಾರ್ಥಿ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net