ಕಾವೇರಿ-೨.೦ ತಂತ್ರಾಂಶ ಅನುಷ್ಠಾನಕ್ಕೆ ಡಾ.ಬಿ.ಸಿ.ಸತೀಶ ಚಾಲನೆ

24adarshkdga2
Published on

ಮಡಿಕೇರಿ: ಕೊಡಗು ಜಿಲ್ಲೆಯ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-೨.೦ ತಂತ್ರಾಂಶ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ನಗರದ ಉಪ ನೋಂದಾಣಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಿದರು.


ಈ ಸಂದರ್ಭ ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ ಮಾತನಾಡಿ, ಕಾವೇರಿ-೨.೦ ತಂತ್ರಾಂಶದಲ್ಲಿ ದಸ್ತಾವೇಜಿನ ನೋಂದಣಿಯಲ್ಲಿ ಆನ್‌ಲೈನ್ ಮೂಲಕ ಸೇವೆಗಳನ್ನು ಪಡೆಯಲು https://kaveri.karnataka.gov.in ಪೋರ್ಟಲ್‌ನಲ್ಲಿ ಯೂಸರ್ ಐಡಿ ಸೃಜಿಸಿ ಲಾಗಿನ್ ಆಗಬೇಕು. ನಂತರ ದಸ್ತಾವೇಜು ನೋಂದಣಿ ಸೇವೆಯನ್ನು ಪೋರ್ಟಲ್‌ನಲ್ಲಿ ಆಯ್ಕೆ ಮಾಡಿಕೊಂಡು ತಂತ್ರಾಂಶ ಕೇಳುವ ಮಾಹಿತಿಯನ್ನು ನಮೂದು ಮಾಡಬೇಕು. ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು. ನೋಂದಾಯಿಸಬೇಕಾದ ದಸ್ತಾವೇಜನ್ನು ೫ಎಂಬಿ ಮೀರದಂತೆ, ಪಿಡಿಎಫ್ ಮಾದರಿಯಲ್ಲಿ ಸ್ಕ್ಯಾನ್ ಮಾಡಿಕೊಳ್ಳಬೇಕು. ಅಪ್‌ಲೋಡ್ ಮಾಡಲಾದ ದಸ್ತಾವೇಜು ಮತ್ತು ಭೌತಿಕ ಪ್ರತಿಗಳಿಗೂ ಯಾವುದೇ ವ್ಯತ್ಯಾಸಗಳಿರಬಾರದು ಎಂದು ತಿಳಿಸಿದರು.


ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ ೦೮೦-೬೮೨೬೫೩೧೬ ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net