ಡಾ.ಬಿ.ಸಿ.ರಾಯ್ ಜೀವನ ವೈದ್ಯರಿಗೆ ಮಾದರಿ

2
Published on

ತುಮಕೂರು: ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಭಾರತರತ್ನ ಡಾ.ಬಿ.ಸಿ.ರಾಯ್ ಜೀವನವನ್ನು ವೈದ್ಯರು ಆದರ್ಶವಾಗಿಟ್ಟುಕೊಂಡು ಸೇವೆಯಲ್ಲಿ ತೊಡಗಬೇಕು ಎಂದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ನಿರ್ದೇಶಕ ಡಾ.ರಮಣ್ ಎಂ. ಹುಲಿನಾಯ್ಕರ್ ಹೇಳಿದರು.

ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಆಸ್ಪತ್ರೆ ವತಿಯಿಂದ ಬುಧವಾರ ವಿಶ್ವ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, 1948-1962ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಬಿ.ಸಿ.ರಾಯ್ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಎಂದಿಗೂ ಮರೆಯಲಾಗದು. ಅವರ ಜನ್ಮದಿನವಾದ ಜುಲೈ 1ರಂದು ದೇಶದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಡಿ.ಕೆ.ಮಹಾಬಲರಾಜು ಮಾತನಾಡಿ, ಡಾ.ಬಿ.ಸಿ.ರಾಯ್ ಅವರ ಬದುಕು ಹಾಗೂ ಅವರು ಅನುಸರಿಸಿದ ಮಾರ್ಗಗಳು ವೈದ್ಯರಿಗೆ ದಾರಿದೀಪವಾಗಬೇಕು. ಇಂತಹ ನಿಸ್ವಾರ್ಥ ಸಾಧಕರು ಹಾಕಿಕೊಟ್ಟ ಮಾರ್ಗಗಳನ್ನು ನಾವುಗಳೆಲ್ಲ ನಡೆಯುವುದೇ ಡಾ.ಬಿ.ಸಿ.ರಾಯ್ ಅವರಂತಹ ಮಹಾಚೇತನಕ್ಕೆ ನಾವು ಸಲ್ಲಿಸುವ ಅತ್ಯುತ್ತಮ ಗೌರವ ಎಂದು ಹೇಳಿದರು.

ಶ್ರೀದೇವಿ ವೈದ್ಯಕೀಯ ಉಪಪ್ರಾಂಶುಪಾಲೆ ಡಾ.ರೇಖಾ ಗುರುಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಚೆನ್ನಮಲ್ಲಯ್ಯ, ಡಾ.ಸೌಮ್ಯಾ, ಡಾ.ಸಂಜಯ್‌ರಾಜ್, ಡಾ.ಚಿನ್ಮಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net