ಡಾ. ಅಣ್ಣಾಬಾವು ಸಾಠೆ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯ

Dr. Annaba called for the installation of Sathe idol
ನಗರದಲ್ಲಿ ಡಾ.ಅಣ್ಣಾಬಾವು ಸಾಠೆ ಅವರ ಮೂರ್ತಿ ಪ್ರತಿಷ್ಠಾಪನೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಾ. ಅಣ್ಣಾಬಾವು ಸಾಠೆ ಸಂಟನಾ ಸಮಿತಿ ಪದಾಧಿಕಾರಿಗಳು ವಿಜಯಪುರದಲ್ಲಿ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಸೋಮಲಿಂಗ ರಣದೇವಿ, ಉಪಾಧ್ಯಕ್ಷ ಲಖನ್​ ದೇವಕುಳೆ, ಜಿಲ್ಲಾ ಕಾರ್ಯದರ್ಶಿ ರಾಹುಲ್​ ಮೋರೆ ಮತ್ತಿತರರಿದ್ದಾರೆ.
Published on

ವಿಜಯಪುರ: ಡಾ. ಅಣ್ಣಾಬಾವು ಸಾಠೆ ಅವರ ಮೂರ್ತಿ ಪ್ರತಿಷ್ಠಾಪನೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಾ. ಅಣ್ಣಾಬಾವು ಸಾಠೆ ಸಂಟನಾ ಸಮಿತಿ ಪದಾಧಿಕಾರಿಗಳು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ನಗರದ ಸ್ಟೇಶನ್​ ರಸ್ತೆಯಲ್ಲಿರುವ ಸತ್ಯಶೋಧಕ ಲೋಕಶಾಹೀರ ಡಾ. ಅಣ್ಣಾಬಾವು ಸಾಠೆಯವರ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಸಾಠೆಯವರ ಜನ್ಮ ದಿನವನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಜತೆಗೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅಲ್ಲದೆ, ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ಜಾರಿ ಮಾಡಲು ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಎಲ್ಲ ವಿಷಯಗಳನ್ನು ಸದನದಲ್ಲಿ ಮಂಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲಾ ಸಂಸ್ಥಾಪಕ ಅಧ್ಯಕ್ಷ ಸೋಮಲಿಂಗ ರಣದೇವಿ, ಉಪಾಧ್ಯಕ್ಷ ಲಖನ್​ ದೇವಕುಳೆ, ಜಿಲ್ಲಾ ಕಾರ್ಯದರ್ಶಿ ರಾಹುಲ್​ ಮೋರೆ, ಪ್ರಕಾಶ ತುಪಸುಂದರ, ನಗರ ಅಧ್ಯಕ್ಷ ಕುಮಾರ ವಾ್ಮೂರೆ, ಶಿವಾಜಿ ರಣದೇವಿ, ಸುನೀಲ ಮಳಗಿ, ಮಧು ಕಸಬೆ, ಭಾರತ ದೇವಕುಳೆ, ಜನಾರ್ಧನ ದೇವುಕುಳೆ, ಸುರೇಶ ವಾ್ಮೂರೆ, ರಾಜು ರಾೆ, ರಮೇಶ ಕಾಂಬಳೆ, ಕುಮಾರ ರಣದೇವಿ, ಕೃಷ್ಣ ದೇವಕುಳೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net