ಕೇಸರಿ ಪೇಟ ತೊಟ್ಟು ಅಂಜಲಿ ನಾಮಪತ್ರ ಸಲ್ಲಿಕೆ

Anjali nimbalkar nomination (1)
Published on

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಡಾ.ಅಂಜಲಿ ನಿಂಬಾಳಕರ್ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಮಾರುಕಟ್ಟೆ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸಚಿವ ಮಂಕಾಳ ವೈದ್ಯ, ಎಂಎಲ್ ಸಿ ಬಿ.ಕೆ.ಹರಿಪ್ರಸಾದ್, ಕಿತ್ತೂರು ಶಾಸಕ ಬಿ.ಡಿ.ಪಾಟೀಲ್ ಇದ್ದರು.

ಕೇಸರಿಗೆ ಮೊರೆ


ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ್ ಸಂಪೂರ್ಣ ಕೇಸರಿ ವಸ್ತ್ರ, ಪೇಟ ತೊಟ್ಟಿದ್ದರು‌. ಬಿ.ಕೆ.ಹರಿಪ್ರಸಾದ ಹೊರತುಪಡಿಸಿ ಉಳಿದವರೂ ಕೇಸರಿ ವಸ್ತ್ರದಲ್ಲಿ ಮಿಂಚಿದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net