ಡಾ. ಅಮೀತ್ ಸತ್ತೂರಗೆ ‘ಅಪ್ರತಿಮ ಹೃದಯ ತಜ್ಞ’ ಪುರಸ್ಕಾರ

h7-amit sattur
Published on

ಹುಬ್ಬಳ್ಳಿ: ದೆಹಲಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಾರತೀಯ ಮಹಿಳೆಯರಲ್ಲಿ ಬಿ.ಪಿ. ಚಿಕಿತ್ಸೆ ಸಮ್ಮೇಳನದಲ್ಲಿ ನಗರದ ಖ್ಯಾತ ಹೃದಯ ತಜ್ಞ ಡಾ. ಅಮೀತ್ ಸತ್ತೂರ ಅವರಿಗೆ ‘ಅಪ್ರತಿಮ ಹೃದಯ ತಜ್ಞ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಮ್ಮೇಳನವು ಅಮೆರಿಕದ ಹೃದಯ ತಜ್ಞರ ಸಂಘದ ಭಾರತೀಯ ಶಾಖೆ, ಅಂತಾರಾಷ್ಟ್ರೀಯ ಹೃದಯ ಅಲ್ಟ್ರಾಸೌಂಡ್ ಸಂಸ್ಥೆ ಮತ್ತು ಜಾಗತಿಕ ಹೃದಯ ಅಕಾಡೆಮಿ ವತಿಯಿಂದ ಆಯೋಜಿಸಲಾಗಿತ್ತು. ಭಾರತೀಯ ಮಹಿಳೆಯರಲ್ಲಿ ಬಿ.ಪಿ. ಕುರಿತು ಹೃದಯ ತಜ್ಞರಲ್ಲದೆ ಇನ್ನುಳಿದ ತಜ್ಞರೂ ಕೂಡಿಕೊಂಡು ಇದರ ಬಗ್ಗೆ ಮುಂದುವರಿದ ರಾಷ್ಟ್ರೀಯ ಮಾರ್ಗಸೂಚಿಗಳನ್ನೂ ರೂಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net