ಡಾ.ಅಂಬೇಡ್ಕರ್ ತತ್ವಾದರ್ಶ ಅಳವಡಿಸಿಕೊಳ್ಳಿ

mdl dss
ಮುದಗಲ್‌ನಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಗೆ ನಾಗಲಾಪುರ ವಿವಿಧೋದ್ದೇಶ ಪ್ರಾಕೃಪಸ ಸಂಘದ ಅಧ್ಯಕ್ಷ ಶರಣಬಸವ ವ್ಯಾಕರನಾಳ ಚಾಲನೆ ನೀಡಿದರು. ಕೆಪಿಸಿಸಿ ವಕ್ತಾರ ತಮ್ಮಣ್ಣ ಗುತ್ತೇದಾರ, ಪುರಸಭೆ ಸದಸ್ಯ ತಸ್ಲಿಂ ಮುಲ್ಲಾ, ಸಣ್ಣಸಿದ್ದಯ್ಯ ಮೇಗಳಪೇಟೆ, ಜೋಸೆಫ್ ಈರ್ಲಾ ಇದ್ದರು.
Published on

ಮುದಗಲ್: ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಗಲಾಪುರ ವಿವಿಧೋದ್ದೇಶ ಪ್ರಾಕೃಪಸ ಸಂಘದ ಅದ್ಯಕ್ಷ ಶರಣಬಸವ ವ್ಯಾಕರನಾಳ ಹೇಳಿದರು.

ಡಾ.ಅಂಬೇಡ್ಕರ್ ಜಯಂತಿ ನಿಮಿತ್ತ ಪಟ್ಟಣದ ಮೇಸ್ತಿ ಪೇಟೆ ಬುದ್ಧನಗರದಲ್ಲಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ದಾರಿಯುದ್ದಕ್ಕೂ ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು. ಪ್ರಮುಖರಾದ ಸಂಜೀವ ಚಲುವಾದಿ, ಮೌನೇಶ ಚಲುವಾದಿ, ಮೌನೇಶ ಬಡೀಗೇರ, ಹುಲಗಪ್ಪ ಚಲುವಾದಿ, ಸುರೇಶ ಬಡಿಗೇರ, ಬಸವರಾಜ ದೊಡ್ಡಮನಿ, ರಾಜು, ವಿನೋದ ಚಲುವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net