ಡಾ.ಅಂಬೇಡ್ಕರ್ ಕನಸು ನನಸಾಗಲಿ

26Huk1
Published on

ಹುಕ್ಕೇರಿ: ಎಲ್ಲರೂ ಜಾತ್ಯತೀತವಾಗಿ ಬದುಕುವ ಮೂಲಕ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗಿಸುವಲ್ಲಿ ಶ್ರಮಿಸಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ಇಲ್ಲಿನ ಎಸ್‌ಕೆ ಹೈಸ್ಕೂಲ್ ಮೈದಾನದಲ್ಲಿ ತಾಲೂಕಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು.

ತಹಸೀಲ್ದಾರ್ ಮಂಜುಳಾ ನಾಯಕ ಮಾತನಾಡಿದರು. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ತಾಲೂಕಿನ ವಿದ್ಯಾರ್ಥಿಗಳು ಮತ್ತು ಗಣರಾಜ್ಯೋತ್ಸವ ವಿಶೇಷ ಕಾರ್ಯಕ್ರಮದ ವಿಜೇತರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಸದಸ್ಯ ರಾಜು ಮುನ್ನೋಳಿ, ಭೀಮಶಿ ಗೋರಖನಾಥ, ಸದಾಶಿವ ಕರೆಪ್ಪಗೋಳ, ಮಹಾಂತೇಶ ತಳವಾರ, ಮುಖಂಡರಾದ ಉದಯ ಹುಕ್ಕೇರಿ, ಎ.ಕೆ.ಪಾಟೀಲ, ಆನಂದ ಗಂಧ, ಕಬೀರ್ ಮಲಿಕ್, ಎಸ್.ನಂಜುಂಡಪ್ಪ, ಇಒ ಟಿ.ಆರ್.ಮಲ್ಲಾಡದ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ಸಿಪಿಐ ಮಹಾಂತೇಶ ಬಸ್ಸಾಪುರ, ಶಶಿಕಾಂತ ವಂದಾಳೆ, ಹೊಳೆಪ್ಪ ಎಚ್., ಎ.ಎಸ್.ಪದ್ಮನ್ನವರ, ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಸವಿತಾ ಹಲಕಿ, ಬಿಇಒ ಪ್ರಭಾವತಿ ಪಾಟೀಲ, ಎಸ್.ಆರ್.ಘಸ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net