ಡಾ.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

VJP-6-1
ವಿಜಯಪುರದ ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ಎಸ್‌ಸಿ ಮತ್ತು ಎಸ್‌ಟಿ ಸಮಿತಿಯಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಲಾಯಿತು. ಸಮಿತಿ ಅಧ್ಯಕ್ಷ ಬಿ.ಎಚ್.ನಾಡಗಿರಿ, ವಿಜಯಕುಮಾರ ಸೂರ್ಯವಂಶಿ, ಅಮರಪ್ಪ ಚಲವಾದಿ ಮತ್ತಿತರರಿದ್ದರು.
Published on

ವಿಜಯಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ವಿಶ್ವರತ್ನ ‘ಬೋಧಿ ಸತ್ವ’ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು. ಜಿಲ್ಲಾ ಸರ್ಕಾರಿ ಎಸ್‌ಸಿ ಮತ್ತು ಎಸ್‌ಟಿ ಸಮಿತಿಯಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಲಾಯಿತು.

ಸಮಿತಿ ಅಧ್ಯಕ್ಷ ಬಿ.ಎಚ್.ನಾಡಗಿರಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಸ್ಥಾಪನೆಯಾಗಿ 18 ವರ್ಷಗಳಾಗಿವೆ. ಸಂಘವು ನೌಕರರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು ಅನೇಕ ಹೋರಾಟಗಳಲ್ಲಿ ಬಾಬಾಸಾಹೇಬರ ಚಿಂತನೆಗಳಿಂದ ಯಶಸ್ಸು ಕಂಡಿದೆ. ಪ್ರಸ್ತುತ ವಿಜಯಪುರದಲ್ಲಿ ಅಂಬೇಡ್ಕರರ ಹೊಸ ಪುತ್ಥಳಿ ಕಾರ್ಯ ಪೂರ್ಣಗೊಂಡಿದ್ದು, ಜ.26ರಂದೇ ಉದ್ಘಾಟನೆಗೊಳಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ವಿಜಯಕುಮಾರ ಸೂರ್ಯವಂಶಿ, ಅಮರಪ್ಪ ಚಲವಾದಿ, ಬಸವಂತ ಗುಣದಾಳ, ಅಡಿವೆಪ್ಪ ಸಾಲಗಲ್ಲ, ಅರವಿಂದ ಲಂಬು, ರಾಹುಸಾಹೇಬ ಗವಾರಿ, ಎಸ್.ವೈ.ಹಾದಿಮನಿ, ಸೂರ್ಯಕಾಂತ ಹೊಸಮನಿ, ನೀಲಕಂಠ ಬನಡೋಡೆ, ಎಸ್.ಎಂ.ಲೋಣಿ, ನಿಜು ಮೇಲಿನಕೇರಿ, ಡಿ.ಎಸ್.ಶಿವಶರಣ, ಬಿ.ಟಿ.ವಾಗಮೋರೆ, ಎಲ್.ಎ.ಕನಸೆ, ಮಲ್ಲಿಕಾರ್ಜುನ ಮಾದರ, ಎಂ.ಎಂ.ಮುಂಡೇವಾಡೆ ಮತ್ತಿತರರಿದ್ದರು.

ಶಿವಾಜಿ ವೃತ್ತದಲ್ಲಿ
ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮಾರ್ಗದಲ್ಲಿ ಸಾಗಿದಾಗ ಮಾತ್ರ ದೇಶ ಬಲಿಷ್ಠವಾಗಿ ನಿರ್ಮಾಣಗೊಳ್ಳಲು ಸಾಧ್ಯ ಎಂದು ಛತ್ರಪತಿ ಶಿವಾಜಿ ೌಂಡೇಷನ್ ಮುಖಂಡ ಧನಂಜಯ ನಿಮಗ್ರೆ ಹೇಳಿದರು.

ನಗರದ ಛತ್ರಪತಿ ಶಿವಾಜಿ ವೃತ್ತದಲ್ಲಿ ಮಂಗಳವಾರ ಶಿವಾಜಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನಾಚರಣೆ ನೇತೃತ್ವ ವಹಿಸಿ ಅವರು ಮಾತನಾಡಿದರು.

ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನದ ಮಾರ್ಗದಲ್ಲಿಯೇ ದೇಶ ಮುನ್ನಡೆಯುತ್ತಿದೆ. ಅವರ ವಿಚಾರಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.

ಮುಖಂಡರಾದ ಗೋಪಾಲ ಮಹಾರಾಜ, ಪ್ರೊ.ಆನಂದ ಕುಲಕರ್ಣಿ, ನೀಲಕಂಠ ಕಂದಗಲ್ಲ, ರಾಹುಲ ಜಾಧವ, ವೀರೇಶ ವಾಲಿಕಾರ, ಪ್ರೇಮ ಚಲವಾದಿ, ಪವನ ನಲ್ಲಗೆ, ಗಣೇಶ ಗರುಡಕರ, ಆನಂದ ಗರುಡಕರ, ಜ್ಞಾನೇಶ್ವರ ಸಿಂಧೆ, ಆಕಾಶ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net