ಹೋಟೆಲ್​ ಡಿಓರೊಗೆ ಡಾ. ಅಗರವಾಲ್​ ಭೇಟಿ

IMG-20250709-WA0028.jpg
Published on

ಹುಬ್ಬಳ್ಳಿ: ಮುಂಬೈನ ಇಂಟರ್ ನ್ಯಾಷನಲ್ ಮೋಟಿವೇಷನಲ್ ಸ್ಪೀಕರ್, ಕಮಲಾಬಾಯಿ ಎಜ್ಯುಕೇಶನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಪವನ ಅಗರವಾಲ್ ಅವರು ಇಲ್ಲಿಯ ವಿದ್ಯಾನಗರ ಬೃಂದಾವನ ಲೇಔಟ್ ನಲ್ಲಿರುವ ರುಚಿಕರ ಸ್ವಾದಿಷ್ಟ ತಿನಿಸುಗಳ ಡಿಓರೊ ಹೋಟೆಲ್ ಗೆ ಇತ್ತೀಚೆಗೆ ಭೇಟಿ ನೀಡಿದರು.

ಮುಂಬೈ ಡಬ್ಬಾವಾಲಾ ಹಾಗೂ ಪೇಪರ್ ವಾಲಾಗಳ ಪೂರೈಕೆ ಸರಪಳಿ ನಿರ್ವಹಣೆ ಕುರಿತು ಉಪನ್ಯಾಸ ನೀಡಿರುವ ಇವರು ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡರು.

ಹೋಟೆಲ್ ಮಾಲೀಕರಾದ ಅನುಷ್ಕಾ ಮುದಕವಿ ಹಾಗೂ ಸಂಜನಾ ಅಂಬ್ಲಿ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಉದ್ಯಮದ ಯಶಸ್ಸಿನ ಬಗ್ಗೆ ಹಲವು ಸಲಹೆಗಳನ್ನು ನೀಡಿದರು.

ಸಾಮರ್ಥ್ಯ, ತ್ಯಾಗ ಹಾಗೂ ಟೀಂ ವರ್ಕ್ ನಿಂದ ಯಾವುದೇ ಉದ್ಯೋಗದಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು.
ಭೇಟಿಯ ಸವಿನೆನಪಿಗಾಗಿ ಚಿಕ್ಕ ಡಬ್ಬಾವನ್ನು ಉಡುಗೊರೆಯಾಗಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net