ರೋಟರಿ ಸಂಸ್ಥೆ ಕಾರ್ಯ ಸ್ಮರಣೀಯ

Dr. AA Nalabanda, Padgrahan, Rotary Institute, Talikote,
ತಾಳಿಕೋಟೆ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡ ಡಾ.ಎ.ಎ.ನಾಲಬಂದ ಅವರಿಗೆ ವಿಜಯಪುರದ ರೋಟರಿಯನ್ ಅನುಸ್ಥಾಪನಾ ಅಧಿಕಾರಿ ಶ್ರೀಕಾಂತ ಶಿರಡೋಣ ಅವರು ಕೊರಳು ಪಟ್ಟಿ ಹಾಕಿ ಅಧಿಕಾರ ನೀಡಿದರು. ಕೆ.ಎಸ್.ಕೂಡಲೆಪ್ಪನವರ ಇತರರಿದ್ದರು.
Published on

ತಾಳಿಕೋಟೆ: ದೇಶ-ವಿದೇಶಗಳಲ್ಲಿ ಅನೇಕ ಸ್ಮರಣೀಯ ಕಾರ್ಯ ಚಟುವಟಿಕೆ ಮಾಡುತ್ತ ಸಾಗಿದ ರೋಟರಿ ಸಂಸ್ಥೆ ತನ್ನದೇಯಾದ ಗೌರವ ಗಳಿಸಿದೆ ಎಂದು ಸ್ಥಳೀಯ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ, ವೈದ್ಯ ಡಾ.ಎ.ಎ.ನಾಲಬಂದ ಹೇಳಿದರು.

ಪಟ್ಟಣದ ವಿಠ್ಠಲ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಕಳೆದ 22 ವರ್ಷಗಳಿಂದ ರೋಟರಿ ಸಂಸ್ಥೆ ಸೇವೆಯಲ್ಲಿ ಮುಂದುವರಿದಿದೆ. ರಕ್ತದಾನ ಶಿಬಿರ, ಕಣ್ಣಿನ ಶಸ ಚಿಕಿತ್ಸೆ, ಹಲ್ಲುಗಳ ತಪಾಸಣೆ ಶಿಬಿರ ಸೇರಿ ಅನೇಕ ಶಿಬಿರಗಳನ್ನು ಏರ್ಪಡಿಸಿದೆ. ಈ ಸಂಸ್ಥೆಯಲ್ಲಿ ಎರಡನೇ ಸಲ ಅಧ್ಯಕ್ಷ ಸ್ಥಾನ ನನಗೆ ದೊರೆತಿರುವುದು ನನಗೆ ಹರ್ಷ ತಂದಿದೆ ಎಂದರು.

ತಾಳಿಕೋಟೆಯಲ್ಲಿನ ಸರ್ಕಾರಿ ಶಾಲೆ- ಕಾಲೇಜುಗಳಲ್ಲಿ ಅಂದಾಜು 100 ಗ್ರೀನ್ ಬೋರ್ಡ್‌ಗಳನ್ನು ನೀಡಲು ಮುಂದಾಗಲಿದ್ದೇವೆ. ಅಂದಾಜು 25 ಸಾವಿರ ರೂ. ಮೌಲ್ಯದ ನ್ಯಾಪ್‌ಕಿನ್ ಡಿಸ್ಟ್ರಾಯರ್ ಯಂತ್ರವನ್ನು ಸ್ಥಳೀಯ ಬ್ರಿಲಿಯಂಟ್ ಶಾಲೆಗೆ ಶೀಘ್ರ ನೀಡಲಾಗುವುದು ಎಂದರು.

ವಿಜಯಪುರದ ರೋಟರಿ ಸಂಸ್ಥೆಯ ಅನುಸ್ಥಾಪನಾ ಅಧಿಕಾರಿ- ನ್ಯಾಯವಾದಿ ಶ್ರೀಕಾಂತ ಶಿರಡೋಣ ಅವರು ನೂತನ ಅಧ್ಯಕ್ಷ ಡಾ.ನಾಲಬಂದ ಅವರಿಗೆ ಸಂಸ್ಥೆಯ ಕೊರಳ ಪಟ್ಟಿ ಹಾಕುವ ಮೂಲಕ ಅಧಿಕಾರ ನೀಡಿದರು.

ಇಳಕಲ್ಲದ ರೋಟರಿಯನ್ ಅಸಿಸ್ಟಂಟ್ ಗೌರನರ್ ಕೆ.ಎಸ್.ಕೂಡಲೆಪ್ಪನವರ ರೋಟರಿಯನ್ ಕಾರ್ಯದರ್ಶಿಯಾಗಿ ನೇಮಕಗೊಂಡ ಎಂ.ಎಸ್.ಸರಶೆಟ್ಟಿ ಅವರಿಗೆ ಕೊರಳಪಟ್ಟಿ ಹಾಕುವ ಮೂಲಕ ಅಧಿಕಾರ ನೀಡಿದರು.

ವಿಜಯಪುರದ ರೋಟರಿ ಸಂಸ್ಥೆಯ ಬಿ.ಎಸ್.ಪಾಟೀಲ ಅವರು ತಾಳಿಕೋಟೆ ರೋಟರಿ ಸಂಸ್ಥೆಯ ಕಾರ್ಯ ವೈಖರಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ರೋಟರಿಯನ್‌ರಾದ ಅಶೋಕ ಬಳಗಾನೂರ, ಡಾ.ಶ್ರೀಶೈಲ ಹುಕ್ಕೇರಿ, ಡಾ.ವಿ.ಎಸ್.ಕಾರ್ಚಿ, ಡಾ.ಆನಂದ ಬಟ್, ಸುಭಾಷ ಬಬಲೇಶ್ವರ, ಪ್ರಭುಗೌಡ ಮದರಕಲ್ಲ, ಎಂ.ಆರ್.ಕತ್ತಿ, ಎಂ.ಎಸ್.ಮಾಳಿ, ಘನಶಾಮ ಚವಾಣ, ಬಸವರಾಜ ಕುಂಬಾರ, ಡಾ.ಮಿದಾ ನಾಲಬಂದ, ಡಾ.ಎನ್.ಆರ್.ಕೋಳ್ಯಾಳ, ಪ್ರಭಾ ಕತ್ತಿ, ಡಾ.ನಜೀರ ಕೋಳ್ಯಾಳ, ಡಾ.ಆರ್.ಎಂ.ಕೋಳ್ಯಾಳ, ವಿ.ಸಿ.ಹಿರೇಮಠ, ಬಿ.ಎನ್.ಹಿಪ್ಪರಗಿ, ಸಿ.ಆರ್.ಕತ್ತಿ, ಬಿ.ಎಸ್.ಗಬಸಾವಳಗಿ, ಅಣ್ಣು ವಾಲಿ, ಆರ್ೀ ಮುರಾಳ, ಶರ್ೀ ಮುಲ್ಲಾ, ಮುದಸರ್ ಜಮಾದಾರ ಇತರರಿದ್ದರು.

ರೋಟರಿಯನ್ ಶಾಮ ಹಂಚಾಟೆ ಸ್ವಾಗತಿಸಿದರು. ದಿನಕರ ಜೋಶಿ ನಿರೂಪಿಸಿದರು. ರೋಟರಿಯನ್ ಮುರುಗೆಪ್ಪ ಸರಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net