ಕೃಷಿ ತಂತ್ರಜ್ಞರ ಸಂಸ್ಥೆಗೆ ಡಾ. ಎ.ಬಿ.ಪಾಟೀಲ್ ಅಧ್ಯಕ್ಷ

Published on

ಬೆಂಗಳೂರು: ಕೃಷಿ ತಂತ್ರಜ್ಞರ ಸಂಸ್ಥೆಯ ನೂತನ ಅಧ್ಯಕ್ಷರಾಗಿ ತೋಟಗಾರಿಕೆ ತಜ್ಞ ಡಾ. ಎ.ಬಿ.ಪಾಟೀಲ್ ಆಯ್ಕೆ ಆಗಿದ್ದಾರೆ.

ಸಂಸ್ಥೆಯ 2025-29ರ ಸಾಲಿನ ಆಡಳಿತ ಮಂಡಳಿಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ 15 ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ನಂತರ ಶನಿವಾರ ನಡೆದ ಪ್ರಥಮ ಸಭೆಯಲ್ಲಿ ಹೊಸ ವ್ಯವಸ್ಥಾಪನಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಜತೆಗೆ 9 ಮಂದಿಯನ್ನು ಸದಸ್ಯರನ್ನಾಗಿ ನಿಯೋಜನೆಗೊಂಡಿದ್ದಾರೆ.

ಪದಾಧಿಕಾರಿಗಳ ವಿವರ:

ಅಧ್ಯಕ್ಷ- ಡಾ. ಎ.ಬಿ.ಪಾಟೀಲ್, ಉಪಾಧ್ಯಕ್ಷ- ಡಾ. ನಾಗರಾಜು ಮತ್ತು ಡಾ. ವಿ.ಐ.ಬೆಣಗಿ, ಕಾರ್ಯದರ್ಶಿ- ಜಿ.ಎಚ್.ಯೋಗೀಶ್, ಜಂಟಿ ಕಾರ್ಯದರ್ಶಿ- ಸಿ.ಎಸ್.ಪಾಟೀಲ್, ಖಜಾಂಚಿ- ಜಿ.ರಾಮೇಗೌಡ.

ಸದಸ್ಯರು: ಸಿ.ಲೋಕೇಶ್ವರ್, ಡಾ. ಟಿ.ಕೆ.ಪ್ರಭಾಕರ ಶೆಟ್ಟಿ. ಡಾ. ಎಸ್.ಬಿ.ಯೋಗಾನಂದ, ಡಾ. ಎಂ.ಭೀಮಣ್ಣ, ಡಾ. ಎ.ಪಿ.ಮಲ್ಲಿಕಾರ್ಜುನ ಗೌಡ, ಡಾ. ರಾಜು ಜಿ.ತೆಗ್ಗೆಳ್ಳಿ, ವಿ.ಎಸ್.ಪಾಟೀಲ್, ಎಸ್​​.ಆರ್.ನಿಡಗುಂದಿ ಮತ್ತು ಶರಣಪ್ಪ ಬಿ.ಕೊಂಗವಾಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net