ಮೈಸೂರು ಫೆರಿಪೆರಲ್ ರಿಂಗ್ ರಸ್ತೆಗೆ ಡಿಪಿಆರ್ ಸಿದ್ಧ : ಸಂಸದ ಪ್ರತಾಪ್ ಸಿಂಹ

Prathap Simha
Published on

ಮೈಸೂರು: ನಗರದ ಬೆಳವಣಿಗೆಯ ದೃಷ್ಟಿಯಿಂದ ಫೆರಿಪೆರಲ್ ರಿಂಗ್‌ರಸ್ತೆ ನಿರ್ಮಾಣಕ್ಕ ಡಿಪಿಆರ್ ಸಿದ್ಧಪಡಿಸಲಾಗಿದ್ದು, 15 ದಿನಗಳ ಒಳಗೆ ಟೆಂಡರ್ ಕರೆಯಲಾಗುವದುಉ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಬಿಗ್‌ಟೆಕ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಂಪನಿಗಳು ಆಗಮಿಸಬೇಕಾದರೆ ಮೂಲಸೌಲಭ್ಯದ ಅವಶ್ಯಕತೆ ಇದೆ. ಹಾಗಾಗಿ ನಗರದ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದರು.

ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಆರು ತಿಂಗಳ ಒಳಗೆ ಸಂಪೂರ್ಣಗೊಳ್ಳಲಿದ್ದು, ಎರಡು ತಿಂಗಳಿನಲ್ಲಿ ಪ್ರಮುಖ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net