

ಮೈಸೂರು: ನಗರ ಮುಂದಿನ ಬೆಳವಣಿಗೆ ಗಮನದಲ್ಲಿಟ್ಟುಕೊಂಡು 73.25 ಕಿ.ಮೀ. ಉದ್ದದ, 45.0 ಮೀ. ಅಗಲದ ಹೊರ ಪರಿಧಿರಸ್ತೆ ನಿಮಾ ಣಕ್ಕೆ ಡಿಪಿಆರ್ ತಯಾರಿಕೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್‌ನಲ್ಲಿ 10 ಕೋಟಿ ರೂ. ಕಾಯ್ದಿರಿಸಲಾಗಿದೆ.
ಪ್ರಸ್ತಾವಿತ ಹೊರ ಪರಿಧಿ ರಸ್ತೆಯ ಅಕ್ಕಪಕ್ಕದಲ್ಲಿ ಹೆರಿಟೇಜ್ ಲಿವಿಂಗ್ ಆ್ಯಂಡ್ ಸ್ಪೋರ್ಟ್ಸ್ ವಿಲೇಜ್, ಫಾರ್ಮಸಿಟಿಕಲ್ ಕ್ಲಸ್ಟರ್ಸ್, ಗಾರ್ಮೆಂಟ್ಸ್ ಆ್ಯಂಡ್ ಅಪರೆಲ್ಸ್ ಕ್ಲಸ್ಟರ್, ಐಟಿ ಆ್ಯಂಡ್ ಬಿಟಿ ಕ್ಲಸ್ಟರ್, ಎಜುಕೇಷನ್ ಆ್ಯಂಡ್ ಹೆಲ್ತ್ ಸೆಂಟರ್ಸ್, ಹಾರ್ಡ್‌ವೇರ್ ಆ್ಯಂಡ್ ಸಾಫ್ಟ್‌ವೇರ್ ಕ್ಲಸ್ಟರ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದರಿಂದ ನಗರದ ಅಭಿವೃದ್ಧಿಯ ವೇಗ ಮತ್ತಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ.
ವರ್ತುಲ ರಸ್ತೆಯ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ವಿಜಯನಗರ 4ನೇ ಹಂತ (ಬಸವನಹಳ್ಳಿ), ಬೋಗಾದಿ ಮತ್ತು ಜೆಪಿ ನಗರ ಕುಪ್ಪಲೂರು ರಸ್ತೆ ಜಂಕ್ಷನ್‌ನಲ್ಲಿ ಕೆಳ ಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಲು ಡಿಪಿಆರ್ ಸಿದ್ಧತೆಗಾಗಿ ಸಮಾಲೋಚಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಇದಕ್ಕೆ 40 ಕೋಟಿ ರೂ. ಕಾಯ್ದರಿಸಲಾಗಿದೆ.