

ರಾಯಚೂರು: ನಗರದ ವಾಸವಿ ನಗರದಲ್ಲಿ ಭಾನುವಾರ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದು, ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.
ಪ್ರಸನ್ನ ಲಕ್ಷ್ಮೀ (35) ಮೃತೆ. 16 ವರ್ಷದ ಹಿಂದೆ ಜಂಬನಗೌಡ ಎನ್ನುವವರೊಂದಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಆದರೆ ಪತಿ ಹಾಗೂ ಆತನ ಕುಟುಂಬಸ್ಥರು ಸುಮಾರು ದಿನಗಳಿಂದ ವರದಕ್ಷಿಣೆ ತರುವಂತೆ ಕಿರಕುಳ ನೀಡುತ್ತಿದ್ದರು.
ವಿಚ್ಛೇದನಕ್ಕೂ ಒತ್ತಾಯ ಮಾಡುತ್ತಿದ್ದರಿಂದ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಕುಟುಂಬ ಸದಸ್ಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ನಗರದ ಮಹಿಳಾ ಠಾಣೆ ಪೊಲೀಸರು ಪತಿ ಜಂಬನಗೌಡನನ್ನು ಬಂಧಿಸಿದ್ದು, ಆತನ ಕುಟುಂಬ ಸದಸ್ಯರ ಪತ್ತೆಗೆ ಬಲೆ ಬೀಸಿದ್ದಾರೆ.