ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ

murder
Published on

ಮೈಸೂರು: ತಾಲೂಕಿನ ಗೆಜ್ಜಗಳ್ಳಿ ಗ್ರಾಮದಲ್ಲಿ ಆಸ್ತಿ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ.


ಮಲ್ಲೇಶ್ ಕೊಲೆಯಾದವರು. ಕೊಲೆ ಆರೋಪದಡಿ ದಾಯಾದಿಗಳಾದ ಪ್ರಕಾಶ್, ವೀರಭದ್ರಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ ಅವರೊಂದಿಗೆ ಬಂಧಿತ ಆರೋಪಿಗಳಾದ ಪ್ರಕಾಶ್, ವೀರಭದ್ರಪ್ಪ ನಡುವೆ ಹಲವು ವರ್ಷಗಳಿಂದ ದಾಯಾದಿ ಜಗಳ ಮುಂದುವರಿದುಕೊಂಡು ಬಂದಿತ್ತು. ಇದು ವಿಕೋಪಕ್ಕೆ ಹೋಗಿ ಆರೋಪಿಗಳು ಶನಿವಾರ ರಾತ್ರಿ 11ರ ಸುಮಾರು ಮಲ್ಲೇಶ್ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net