ಹೊಸ ಮೋಟಾರು ವಾಹನ ಕಾಯ್ದೆ ಹಿಂಪಡೆಯಿರಿ

17-01-Shiva-4
ಹೊಸ ಮೋಟಾರು ವಾಹನ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಖಾಸಗಿ ವಾಹನ ಚಾಲಕರ ಸಂಘದಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಂಘದ ಅಧ್ಯಕ್ಷ ಸೈಯದ್ ಹಸನ್, ಪದಾಕಾರಿಗಳಾದ ಅಜೀಮ್ ಪಾಷಾ, ಮಹ್ಮದ ಎಜಾಜುದ್ದೀನ್, ಅಹ್ಮದ್ ರಯೀಸ್, ತೌಫೀಕ್ ಹುಸೇನ್, ಮಹ್ಮದ್ ಖುತುಬುದ್ದೀನ್, ಸೈಯದ್ ಶರ್ೀ, ಬ್ರಿಜ್ಜೇಶ್ ಪಾಟೀಲ್, ಮಹ್ಮದ್ ಮೊಹಸೀನ್ ಇದ್ದರು.
Published on

ರಾಯಚೂರು: ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ಮೋಟಾರು ವಾಹನ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಖಾಸಗಿ ವಾಹನ ಚಾಲಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ತೀನ್ ಕಂದೀಲ್ ವೃತ್ತದಿಂದ ಮೆರವಣಿಗೆ ಮೂಲಕ ಟಿಪ್ಪು ಸುಲ್ತಾನ್ ಉದ್ಯಾನವನಕ್ಕೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಮನವಿ ಸಲ್ಲಿಸಿ, ವಾಹನ ಚಾಲಕರಿಗೆ ಮಾರಕವಾಗಿರುವ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ಕಾಯ್ದೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದು, ಹಿಟ್ ಅಂಡ್ ರನ್ ಪ್ರಕರಣ ತಡೆಯುವ ನಿಟ್ಟಿನಲ್ಲಿ ಕಾಯ್ದೆಯಲ್ಲಿರುವ ಕ್ರಮಗಳು ಉದ್ದೇಶ ಸೌಮ್ಯವಾಗಿದ್ದರೂ ತುರ್ತು ಮರು ಪರಿಶೀಲನೆಗೆ ಅಗತ್ಯವಿರುವ ಕಾನೂನಿನಲ್ಲಿ ಗಮನಾರ್ಹ ಲೋಪಗಳಿವೆ.
ಪ್ರಸ್ತಾವಿತ ಕಾನೂನಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಮಗ್ರ ತನಿಖಾ ಪ್ರೋಟೋಕಾಲ್ ರೂಪಿಸಿರುವುದಿಲ್ಲ. ಅಪರಾಧ ನಿರ್ಧರಿಸುವಲ್ಲಿ ಸ್ಪಷ್ಟತೆಯ ಅಗತ್ಯವಿದೆ. ವಾಹನವು ಹಿಂದಿನಿಂದ ಡಿಕ್ಕಿಯಾದಾಗ ಸಣ್ಣ ವಾಹನದ ಚಾಲಕನ ದೋಷವು ಸರಿಯಾಗಿ ತನಿಖೆಯಾಗದೆ ದೊಡ್ಡ ವಾಹನ ಸವಾರರ ಮೇಲೆ ಆರೋಪಗಳು ಬರಲಿವೆ.
ಜತೆಗೆ ಪ್ರಕರಣಗಳಲ್ಲಿ ವಿಸಿ ದಂಡ ಮತ್ತು ಸಜೆ ಹೆಚ್ಚಾಗಿದ್ದು, ಬಡ ವಾಹನ ಚಾಲಕರು ಇದರಿಂದ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಕಾರಣ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೈಯದ್ ಹಸನ್, ಪದಾಕಾರಿಗಳಾದ ಅಜೀಮ್ ಪಾಷಾ, ಮಹ್ಮದ ಎಜಾಜುದ್ದೀನ್, ಅಹ್ಮದ್ ರಯೀಸ್, ತೌಫೀಕ್ ಹುಸೇನ್, ಮಹ್ಮದ್ ಖುತುಬುದ್ದೀನ್, ಸೈಯದ್ ಶರ್ೀ, ಬ್ರಿಜ್ಜೇಶ್ ಪಾಟೀಲ್, ಮಹ್ಮದ್ ಮೊಹಸೀನ್ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಸೈಯದ್ ಬಾಷಾ ಖಾದ್ರಿ, ಪದಾಕರಿಗಳಾದ ಮುತ್ತುಸ್ವಾಮಿ, ಮಹ್ಮದ್ ಇಬ್ರಾಹಿಂ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net