ಸಂಶಯವೇ ಶ್ರದ್ದೆಯ ವೈರಿ

18 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಅಧ್ಯಯನ ಸಂದರ್ಭದಲ್ಲಿ ವಿನಾಕಾರಣ ಭಯ ಹಾಗೂ ಸಂಶಯ ಪಡಬಾರದು. ಸಂಶಯವು ವಿದ್ಯಾರ್ಥಿ ಶಕ್ತಿ ಕುಗ್ಗಿಸುತ್ತದೆ. ಶ್ರದ್ದೆಯ ವೈರಿಯೇ ಸಂಶಯ ಎಂದು ಆರ್​ಎಲ್​ಎಸ್​ ಪ್ರೌಢ ಶಾಲೆ ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಎ. ಸಿ. ವಿರಕ್ತಮಠ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆರ್​ಎಲ್​ಎಸ್​ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಭಯಮುಕ್ತ ಪರೀಕ್ಷೆ ಎದುರಿಸುವುದು ಹೇಗೆ? ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಅಧ್ಯಯನ ನಿರತರಾದಾಗ ಅನ್ಯ ವಿಷಯಗಳು ಮನ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಶ್ರದ್ಧೆ, ಬದ್ಧತೆ, ಆತ್ಮ ವಿಶ್ವಾಸದಿಂದ ಯಶಸ್ಸು ಸಿಗಲಿದೆ. ಉತ್ಸಾಹ ಭರಿತರಾಗಿ ಪ್ರೀತಿಯಿಂದ ಓದಬೇಕು ಎಂದರು.

ಡಿಮ್ಹಾನ್ಸ ಮನೋ ಆರೋಗ್ಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಿಗೆ ಸಮಯ ಪರಿಪಾಲನೆ ಮುಖ್ಯ. ಓದುವಾಗ ಆರೋಗ್ಯದ ಕಡೆ ಗಮನ ಹರಿಸಬೇಕು. ಹಾರ್ಡ್​ವರ್ಕ್​ ಬದಲಾಗಿ ಸ್ಮಾರ್ಟ್​ ವರ್ಕ್​ಗೆ ಆದ್ಯತೆ ನೀಡಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಸಿ.ವಿ. ಕಣಬರಗಿ ಮಾತನಾಡಿದರು. ಪ್ರೌಢ ಶಾಲೆ ಉಪ ಪ್ರಾಚಾರ್ಯ ಆರ್​.ಬಿ. ಬಾನಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಪ್ರಮೀಳಾ ಜಕ್ಕಣ್ಣವರ, ಎಂ.ಎಸ್​. ನರೇಗಲ್​, ಎಂ.ಜಿ. ದೇವಜಿ, ವೈ.ಎಂ. ಬೊಮ್ಮನಹಳ್ಳಿ, ಬಿ.ವಿ. ಸಾಲಿ, ಇತರರು ಇದ್ದರು.

ಎಂ.ಆರ್​. ಹಿರೇಮಠ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಸಿ. ನೇಕಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net