ಅನುಮಾನ ಮೂಡಿಸಿದ ನಾಯಕರ ನಡೆ

20-DVD-3 (Vishwanath)
ವಿಶ್ವನಾಥ
Published on

ದೇವದುರ್ಗ: ತಾಲೂಕಿನಲ್ಲಿ ಎರಡು ಟೋಲ್‌ಗೇಟ್ ನಿರ್ಮಾಣ ತಡೆಯುವಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ವಿಫಲರಾಗಿದ್ದಾರೆ ಎಂದು ಭೀಮ್ ಆರ್ಮಿ ಸಂಘಟನೆ ತಾಲೂಕು ಅಧ್ಯಕ್ಷ ವಿಶ್ವನಾಥ ಬಲ್ಲಿದವ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು. ಶಾಸಕರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಶಾಸಕಿ ಮೌನವಾಗಿರುವುದೆ ಟೋಲ್‌ಗೇಟ್ ನಿರ್ಮಾಣಕ್ಕೆ ಕಾರಣವಾಗಿದೆ. ಶಾಸಕರ ಅನುಮತಿ ಇಲ್ಲದೆ, ಮಾಹಿತಿ ನೀಡದೆ ಅದ್ಹೇಗೆ ಗೇಟ್ ನಿರ್ಮಿಸುತ್ತಿದ್ದಾರೆೆ. ಕಲ್ಮಲಾ-ತಿಂಥಣಿ ಬ್ರಿಡ್ಜ್ ಹೆಸರಿಗೆ ಮಾತ್ರ ಹೆದ್ದಾರಿಯಾಗಿದ್ದು ಅಭಿವೃದ್ಧಿಯಾಗಿಲ್ಲ.

73 ಕಿಮೀ ಅಂತರದಲ್ಲಿ ಎರಡು ಟೋಲ್‌ಗೇಟ್ ನಿರ್ಮಿಸುತ್ತಿರುವುದು ಖಂಡನೀಯ. ಶಾಸಕಿ ಕರೆಮ್ಮ ಜಿ.ನಾಯಕ, ಸಂಸದ ಜಿ.ಕುಮಾರನಾಯಕ, ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ ಸೇರಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಘಟನಾನುಘಟಿ ನಾಯಕರು ಸೈಲೆಂಟ್ ಆಗಿರುವುದು ಅನುಮಾನ ಮೂಡಿಸಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಟೋಲ್‌ಗೇಟ್ ರದ್ದುಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ರಚಿಸಿಕೊಂಡು ಜನಜಾಗೃತಿ ಮೂಡಿಸಿ ತಾಲೂಕಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಕಾರ್ಯದರ್ಶಿ ಮೋಹನ್ ಬಲ್ಲಿದವ್, ಮುಖಂಡರಾದ ಕ್ರಾಂತಿಕುಮಾರ, ಗುಂಡಪ್ಪ ನಾಯಕ, ಚಾಂದ್‌ಪಾಷಾ ಬಡಿಗೇರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net