ಅನ್ಯ ರಾಜ್ಯದವರಿಂದ 2 ಕಡೆ ಮತದಾನ, ಪರಿಶೀಲನೆಗೆ ಕರ್ನಾಟಕ ಸಮತಾ ಪಕ್ಷ ಆಗ್ರಹ

IMG_20240410_113311_29.jpg
Published on

ಹುಬ್ಬಳ್ಳಿ: ಉದ್ಯೋಗ ಅರಸಿ ಬಂದಿರುವ ಅನ್ಯ ರಾಜ್ಯದ ಬಹಳಷ್ಟು ಜನರು ಎರಡು ಕಡೆ ಮತದಾನ ಮಾಡುವ ಸಂಶಯಗಳಿವೆ. ಹಾಗಾಗಿ ಚುನಾವಣಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಬೇಕು. ಸಮರ್ಪಕ ಮಾಹಿತಿ ನೀಡಬೇಕು ಎಂದು ಕರ್ನಾಟಕ ಸಮತಾ ಪಕ್ಷದ ಅಧ್ಯಕ್ಷ ವಿರೇಶ ಸೊಬರದಮಠ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ತಾನ, ಗುಜರಾತ ಮುಂತಾದೆಡೆಯಿಂದ ಬಂದಿರುವ ಅನೇಕ ಜನರು ಇಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಈ ಭಾಗದ ಸಾಂಪ್ರದಾಯಿಕ ವ್ಯಾಪಾರಸ್ಥರೊಂದಿಗೆ ಪೈಪೋಟಿ ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ತಮ್ಮ ರಾಜ್ಯದ ಚುನಾವಣೆಗಳಲ್ಲೂ ಮತದಾನ ಮಾಡುತ್ತಾರೆ.

ಇಲ್ಲಿಯೂ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದು ಗಂಭೀರ ವಿಚಾರವಾಗಿದ್ದು, ಆಯೋಗ ಸೂಕ್ತ ತನಿಖೆ ಮಾಡಬೇಕು ಎಂದರು.

ಒಂದು ವಾರದೊಳಗೆ ಚುನಾವಣಾ ಆಯೋಗ ಅನ್ಯ ರಾಜ್ಯದ ಮತದಾರರ ಬಗ್ಗೆ ಮಾಹಿತಿ ಪಡೆದು ಒಂದೇ ಕಡೆ ಮತದಾನ ಮಾಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಇಲ್ಲಿನ ಸಾಂಪ್ರದಾಯಿಕ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ಸಭೆ ಕರೆಯಲಾಗುವುದು ಎಂದರು.

ಶಿರಹಟ್ಟಿಯ ಶ್ರೀ ಕೀರ ದಿಂಗಾಲೇಶ್ವರ ಸ್ವಾಮೀಜಿ ಅವರ ಶಿಷ್ಯನಾಗಿ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಅವರು ಪಕ್ಷೇತರ ಅಭ್ಯಥಿರ್ಯಾಗಿ ಲೋಕಸಭೆಗೆ ಸ್ಪರ್ಧೆ ಮಾಡುವುದು ಸೂಕ್ತವಲ್ಲ ಎಂದರು.

ರೈತ ಮುಖಂಡ ಗುರು ರಾಯನಗೌಡ್ರ, ಮಲ್ಲಿಕಾರ್ಜುನ ಆಲೇಕರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net