

ಹಾವೇರಿ: ಡೆಲ್ ಫೈನಾನ್ಸ್ನಲ್ಲಿ ಹೂಡಿಕೆ ಮಾಡಿದರೆ ಡಬಲ್ ಲಾಭಾಂಶ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ೨.೨೬ ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕ್ರೆÊಂ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಇಲ್ಲಿಯ ಬಸವೇಶ್ವರ ನಗರದ ರಮೇಶ ಪ್ರಭಪ್ಪ ಹಾವನೂರ (೫೧) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಡೆಲ್ ಫೈನಾನ್ಸ್ನಲ್ಲಿ ಹೂಡಿಕೆ ಮಾಡಿದರೆ ಡಬಲ್ ಲಾಭಾಂಶ ದೊರೆಯಲಿದೆ ಎಂದು ನಂಬಿಸಿ ಅವರ ವಿವಿಧ ಖಾತೆಗಳಿಂದ ೨.೨೬ ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.