ಮಾವನೂರಿನಲ್ಲಿ ದಂಪತಿ ಕೊಲೆ ಮೂವತ್ತು ಗಂಟೆ ಬಳಿಕ‌ ಬೆಳಕಿಗೆ

IMG_20230709_173253.jpg
Published on

ಬೆಳಗಾವಿ : ದಂಪತಿಗಳಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹುಕ್ಕೇರಿ ತಾಲೂಕಿನ ಮಾವನೂರಿನ ಗಜೇಂದ್ರ ಈರಪ್ಪ ಹುನ್ನೂರಿ(60) ಹಾಗೂ ದ್ರಾಕ್ಷಾಯಿಣಿ ಗಜೇಂದ್ರ ಹುನ್ನೂರಿ(45) ಹತ್ಯೆಗೀಡಾದ ದಂಪತಿ.

ಮಾವನೂರಿನಲ್ಲಿನ ಮನೆಯಲ್ಲಿ ದಂಪತಿಗಳಿಬ್ಬರನ್ನು ಮಾರಕಾಸ್ತ್ರಗಳಿಂದ ಮುಖ ಮತ್ತು ತಲೆಗೆ ಹಲ್ಲೆ ನಡೆಯಿಸಿ ಶುಕ್ರವಾರ ಕೊಲೆಗೈಯಲಾಗಿದೆ. ದಂಪತಿಗೆ ಓರ್ವ ಮಗಳಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಶುಕ್ರವಾರ ಮನೆಯಲ್ಲಿ ದಂಪತಿ ಮಾತ್ರವೇ ವಾಸಗಿದ್ದು, ಶುಕ್ರವಾರವೇ ಯಾರೋ ಮಾರಕಾಸ್ತ್ರಗಳಿಂದ ಕೊಚ್ಚಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಕ್ಕಪಕ್ಕದವರು ಭಾನುವಾರ ಬೆಳಗ್ಗೆ  ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊಲೆಯಾಗಿರುವ ದಂಪತಿ
ಕೊಲೆಯಾಗಿರುವ ದಂಪತಿ

ಸ್ಥಳಕ್ಕೆ ದೌಡಾಯಿಸಿದ ಯಮಕನಮರಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆಯ ಬಳಿಕ ಮಾಹಿತಿ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net