ಡಬಲಿಂಗ್ ಮಾರ್ಗದ ತಾಂತ್ರಿಕ ಕಾಮಗಾರಿ ಹಿನ್ನೆಲೆ ವಿಜಯವಾಡ ರೈಲು ತಾತ್ಕಾಲಿಕ ರದ್ದು

train
Published on

ಬಳ್ಳಾರಿ: ಆಂಧ್ರಪ್ರದೇಶದ ಡೋನ್ ಹಾಗೂ ಪೆಂಡೇಕಲ್ಲು ನಡುವೆ ಡಬಲಿಂಗ್ ಮಾರ್ಗಕ್ಕೆ ಸಂಬಂಧಿಸಿದ ತಾಂತ್ರಿಕ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ, ಹೊಸಪೇಟೆ, ಕೊಪ್ಪಳ ಮಾರ್ಗದಲ್ಲಿ ಸಂಚರಿಸುವ ಹುಬ್ಬಳ್ಳಿ-ವಿಜಯವಾಡ ರೈಲಿನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಹುಬ್ಬಳ್ಳಿಯಿಂದ ವಿಜಯವಾಡಕ್ಕೆ ತೆರಳುವ ರೈಲು ಫೆ.19ರಿಂದ ಮಾ.6ರವರೆಗೆ ಸಂಚರಿಸುವುದಿಲ್ಲ. ವಿಜಯವಾಡದಿಂದ ಹುಬ್ಬಳ್ಳಿಗೆ ತೆರಳುವ ರೈಲು ಫೆ.20ರಿಂದ ಮಾ.7ರವರೆಗೆ ಸಂಚರಿಸುವುದಿಲ್ಲ ಎಂದು ನೈರುತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net