

ಕುಳಗೇರಿ ಕ್ರಾಸ್ : ಸುೇತ್ರ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿಗಳ ಸ್ಮರಣೋತ್ಸವ ಸಾವಿರಾರು ಭಕ್ತ ಸಮೂಹದ ಮಧ್ಯೆ ಸಂಭ್ರಮದಿಂದ ನೆರವೇರಿತು.ಮಹಾ ತಪಸ್ವಿಗಳಾದ ದೊರೆಸ್ವಾಮಿ ಹಾಗೂ ಬ್ರಹ್ಮಾನಂದರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು ಸಕಲ ವಾದ್ಯಗಳೊಂದಿಗೆ ಪೂರ್ಣಕುಂಭ ಆರತಿ ಸಮೇತ ರಾಷ್ಟ್ರೀಯ ಹೆದ್ದಾರಿ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಪ್ರತಿ ಮನೆಯ ಬಾಗಿಲಿಗೆ ತೆರಳಿ ಭಕ್ತರಿಗೆ ಶ್ರೀಗಳ ದರ್ಶನ ನೀಡಿದರು. ಶಿವನಾಮ ಹೇಳುತ್ತ ಸಾಗಿದ ಭಕ್ತ ಸಮೂಹ ದೊರೆಸ್ವಾಮಿಗಳ ಕೃಪೆಗೆ ಪಾತ್ರರಾದರು.ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಪೂಜ್ಯ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಮಹಾತ್ಮರಾದ ದೊರೆಸ್ವಾಮಿಗಳನ್ನು ನಾವೆಲ್ಲ ನೆನೆಯಬೇಕು. ಸಂತರು ಶರಣರು ನೀಡಿದ ಸಂದೇಶಗಳು, ಚಿಂತನೆಗಳನ್ನು ಸ್ಮರಿಸಬೇಕು. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನಾವೆಲ್ಲ ನೆನೆಪಿಟ್ಟುಕೊಳ್ಳಬೇಕು ಎಂದರು ಹೇಳಿದರು.
ಜಾತ್ರೆ ಅಂಗವಾಗಿ ದೊರೆಸ್ವಾಮಿ ಮಠದ ಶ್ರೀ ಶಾಂತವೀರ ಧಾರ್ಮಿಕ ಪಾಠಶಾಲೆಯ ವಟುಗಳಿಂದ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಧಾರ್ಮಿಕ ಕೈಂಕರ್ಯಗಳು ನಡೆದವು. ಜಾತ್ರೆಯ ಅಂಗವಾಗಿ ಅನ್ನ ಸಂತರ್ಪಣೆ ನೆರವೇರಿತು.
ಭೈರನಹಟ್ಟಿ ದೊರೆಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.