ದೋರನಹಳ್ಳಿ ಜನರ ಪ್ರೀತಿ-ವಿಶ್ವಾಸ ಶಾಶ್ವತ

1610DHL1
ನವರಾತ್ರಿ ಉತ್ಸವ ನಿಮಿತ್ತ ಕೊಡೇಕಲ್ ದ್ಯಾಮಮ್ಮ ದೇವಸ್ಥಾನದಲ್ಲಿ ೯ ದಿನಗಳ ಪುರಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಶ್ರೀ ವೃಷಭೇದ್ರ ಅಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ್, ರಾಣಿ ರಂಗಮ್ಮ ಜಹಾಗೀರದಾರ್, ರಂಗನಾಥ ದೋರಿ ಇತರರಿದ್ದರು.
Published on

ದೋರನಹಳ್ಳಿ: ಚುನಾವಣೆ ಬಂದು ಹೋಗುತ್ತವೆ ಆದರೆ ನಮ್ಮ ನಿಮ್ಮ ನಡುವಿನ ಬಾಂಧವ್ಯ, ಪ್ರೀತಿ ವಿಶ್ವಾಸ ಮಾತ್ರ ಶಾಶ್ವತವಾಗಿರುತ್ತದೆ ಎಂದು ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಹೇಳಿದರು.

ಗ್ರಾಮದಲ್ಲಿ ತಾಯಮ್ಮ ದೇವಿಯ ನೂತನ ದೇವಸ್ಥಾನ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ದೋರನಹಳ್ಳಿ ಜನ ದೈವಿ ಭಕ್ತರು. ನಿಮ್ಮಿಂದ ನನಗೂ ದೇವರ ದರ್ಶನ ಆಶೀರ್ವಾದ ಲಭಿಸಿದೆ. ನಾನು ಗ್ರಾಮಕ್ಕೆ ಎಷ್ಟೇ ಸಲ ಬಂದರೂ ಪ್ರೀತಿಯ ಸ್ವಾಗತ ಸಿಕ್ಕಿದೆ. ಇಲ್ಲಿನ ಯುವಕರು ತುಂಬಾ ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದರು.

ದೇವಸ್ಥಾನದ ಕಟ್ಟಡ ಸರಿ ಇಲ್ಲ ಎಂದು ಯುವಕರು ನನ್ನ ಗಮನಕ್ಕೆ ತಂದಿದ್ದರು. ನನ್ನ ಪುತ್ರ ಮಹೇಶರಡ್ಡಿ ವೈಯಕ್ತಿಕವಾಗಿ ಸಹಾಯ ಮಾಡಿದ್ದು ನನಗೆ ಗೊತ್ತಿರಲಿಲ್ಲ. ಉದ್ಘಾಟನೆಗೆ ಆಹ್ವಾನಿಸಿದಾಗಲೇ ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಇಂದಿನ ಯುವಕರು ದುಶ್ಚಟಗಳಿಗೆ ಹಾಳಾಗುವ ಸಮಯದಲ್ಲಿ ಇಲ್ಲಿನ ಯುವಕರು ಸಂಸ್ಕೃತಿ, ದೇವಸ್ಥಾನ ನಿರ್ಮಾಣದಂತಹ ಸತ್ಕಾರ್ಯ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.

ಗ್ರಾಮದ ಶ್ರೀ ಶಾಂಭವಿ ಮಾತಾ ಚಿಕ್ಕಮಠದ ಪೀಠಾಧಿಪತಿ ಶ್ರೀ ಶಿವಲಿಂಗ ರಾಜೇಂದ್ರ ಶಿವಾಚಾರ್ಯರಿಂದ ನೂತನ ಮೂರ್ತಿ ಪ್ರತಿಷ್ಠಾಪನೆಯ ವಿಧಿ-ವಿಧಾನ ನೆರವೇರಿಸಿದರು. ಮಹಲ್ ರೋಜಾದ ಶ್ರೀ ಮಲ್ಲಿಕಾರ್ಜುನ ಮುತ್ಯಾ ದೇವಸ್ಥಾನಕ್ಕೆ ಆಗಮಿಸಿ ತಾಯಮ್ಮ ದೇವಿ ದರ್ಶನ ಪಡೆದರು. ನಂತರ ಮಹಾಪ್ರಸಾದ ನಡೆಯಿತು.

ಪಾಂಡು ನಾಟೇಕಾರ, ದೇವು ಕೊಂತಲ್, ದಶವಂತ ದೊರೆ, ಹನೀಫ್ ಪಾಶಾ, ಅಬ್ದುಲ್ ಬಾಷಾ ಜೇವರ್ಗಿ, ಬಾಬು ಕೊರಬಾ, ಸಾಯಿಬಣ್ಣ ಟೋಕಾಪುರ, ಅಯ್ಯಪ್ಪ ದೊರೆ, ಶೇಕಪ್ಪ ಪಾಲ್ಕಿ, ಶರಣು ನಾಟೇಕಾರ, ಕಿರಣ ತುಂಗೆ, ಹಳ್ಳೆಪ್ಪ ಅಣಿಬಿ, ಬಸವರಾಜ ಗುಬ್ಬಿ, ಸಿದ್ದಪ್ಪ ವನಿಗೇರಿ, ಶಿವಪ್ಪ ಪಾಲ್ಕಿ, ರಾಜು ಕೊಂತಲ್, ಮಲ್ಲು ಚಿನ್ನಾಕಾರ, ಸಾಬಣ್ಣ ಗುಂಟ್ನೂರ, ಸಿದ್ದು ಕೊಂತಲ್, ಗೋಪಾಲ್ ದೊರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net