ಹಿರಿಯ ವಯಸ್ಕರ ಮನೆಮನೆ ಮತದಾನ

Door-to-door voting of older adults
ತೇರದಾಳ ತಾಲೂಕಿನ ಗ್ರಾಮಗಳಿಗೆ ಚುನಾವಣೆ ಸಿಬ್ಬಂದಿ ಹಿರಿಯ ವಯಸ್ಕರ ಮನೆಗೆ ತೆರಳಿ ಮತದಾನ ಮಾಡಿಸಿದರು. ಅಧಿಕಾರಿ ಶ್ರೀಧರ ನಂದಿಹಾಳ, ಎಸ್.ಎಸ್. ಜಾಂಬೋರೆ ಇದ್ದರು.
Published on

ತೇರದಾಳ: ಅತ್ತ ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ನಡೆದರೆ, ಇತ್ತ ಎರಡನೇ ಹಂತದ ಚುನಾವಣೆಗೆ 85ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರು ಮನೆಯಲ್ಲೇ ಕುಳಿತು ಶುಕ್ರವಾರ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದರು.

ತೇರದಾಳ, ಸಸಾಲಟ್ಟಿ, ಕಾಲತಿಪ್ಪಿ, ಗೋಲಭಾವಿ, ಹನಗಂಡಿ, ತಮದಡ್ಡಿ, ಹಳಿಂಗಳಿ, ಯರಗಟ್ಟಿ ಗ್ರಾಮಗಳಲ್ಲಿ ಹಿರಿಯ ಜೀವಿಗಳು ಮತದಾನ ಮಾಡಿದರು.

ಬೆಳಗ್ಗೆಯೇ ಮತದಾನಕ್ಕೆ ನಿಯೋಜನೆಗೊಂಡ ಚುನಾವಣೆ ಸಿಬ್ಬಂದಿ ಮತದಾರರ ಮನೆಗಳಿಗೆ ತೆರಳಿ ಮತದಾನ ಮಾಡುವ ಕುರಿತು ಮಾಹಿತಿ ನೀಡಿ ಮತದಾನ ಮಾಡಿಸಿದರು. ತೇರದಾಳದಲ್ಲಿ 42 ಹಾಗೂ ಸಸಾಲಟ್ಟಿ, ಕಾಲತಿಪ್ಪಿ, ಗೋಲಭಾವಿ, ಹನಗಂಡಿ, ಗ್ರಾಮದಲ್ಲಿ 32 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿದ್ದಾರೆ.

ಸಸಾಲಟ್ಟಿ ವ್ಯಾಪ್ತಿಯಲ್ಲಿ ಸೆಕ್ಟರ್ ಅಧಿಕಾರಿ ಶ್ರೀಧರ ನಂದಿಹಾಳ, ಮತದಾನ ನಿಯೋಜಿತ ಅಧಿಕಾರಿಗಳಾದ ಎಸ್.ಎಸ್. ಜಾಂಬೋರೆ, ಎಂ.ಐ. ಮುದ್ದಾಪುರ, ಎಸ್.ಎನ್. ಸಾತಾನೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net