ಮನೆ, ಮನೆಗೆ ಶ್ರೀರಾಮನ ಆಶೀರ್ವಾದ ಕಾರ್ಯಕ್ರಮಕ್ಕೆ ಚಾಲನೆ

akshate
ಚಿಮ್ಮಡದಲ್ಲಿ ನಡೆದ ಮನೆ ಮನೆಗೆ ಶ್ರೀರಾಮನ ಆಶೀರ್ವಾದ ಕಾರ್ಯಕ್ರಮಕ್ಕೆ ಶ್ರೀಪ್ರಭು ಮಹಾಸ್ವಾಮಿಗಳು, ಶ್ರೀ ಜನಾರ್ಧನ ಮಹಾರಾಜರು ಚಾಲನೆ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಪರಪ್ಪ ಪಾಲಭಾವಿ, ಪ್ರಕಾಶ ಪಾಟೀಲ, ಮನೋಜ ಹಟ್ಟಿ, ಚಂದ್ರಕಾಂತ ಜಾಡಗೌಡ, ಅವ್ವನಪ್ಪಾ ಮುಗಳಖೋಡ, ಬಸವರಾಜ ಬಿಜಾಪುರ, ಕಾಳು ಬಡಿಗೇರ, ಶಿವಪ್ಪ ದಿನ್ನಿಮನಿ ಇತರರಿದ್ದರು.
Published on

ಚಿಮ್ಮಡ: ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಜ. 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಮನೆ ಮನೆಗೆ ಶ್ರೀರಾಮನ ಆಶೀರ್ವಾದ ಕಾರ್ಯಕ್ರಮಕ್ಕೆ ಶ್ರೀಪ್ರಭು ಮಹಾಸ್ವಾಮಿಗಳು, ಶ್ರೀ ಜನಾರ್ಧನ ಮಹಾರಾಜರು ಶನಿವಾರ ಚಾಲನೆ ನೀಡಿದರು.

ಸಾಂಕೇತಿಕವಾಗಿ ಗ್ರಾಮದ ಐದು ಮನೆಗಳ ಮಹಿಳೆಯರಿಗೆ ಅಕ್ಷತೆ ನೀಡಿ ಆಶೀರ್ವದಿಸಿ ಮಾತನಾಡಿದ ಶ್ರೀಗಳು, ಅಕ್ಷತೆಯನ್ನು ಜಗುಲಿ ಮೇಲಿಟ್ಟು ನಿತ್ಯ ಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆ ದಿನದಂದು ಮನೆಯ ಹಿರಿಯರಿಂದ ಕಿರಿಯರ ತಲೆ ಮೇಲೆ ಈ ಅಕ್ಷತೆ ಹಾಕಿ ಆಶೀರ್ವದಿಸಿದರೆ ಶ್ರೀರಾಮನ ಆಶೀರ್ವಾದ ದೊರತಂತೆ ಎಂದರು. ನಂತರ ಗ್ರಾಮದ ಪ್ರತಿ ಮನೆಗಳಿಗೆ ಈ ಅಕ್ಷತೆಯನ್ನು ಮಾಹಿತಿ ಪತ್ರದೊಂದಿಗೆ ಹಂಚಲಾಯಿತು.

ಗ್ರಾಪಂ, ಮಾಜಿ ಅಧ್ಯಕ್ಷ ಪರಪ್ಪ ಪಾಲಭಾವಿ, ಪ್ರಕಾಶ ಪಾಟೀಲ, ಮನೋಜ ಹಟ್ಟಿ, ಚಂದ್ರಕಾಂತ ಜಾಡಗೌಡ, ಅವ್ವನಪ್ಪ ಮುಗಳಖೋಡ, ಬಸವರಾಜ ಬಿಜಾಪುರ, ಕಾಳು ಬಡಿಗೇರ, ಶಿವಪ್ಪ ದಿನ್ನಿಮನಿ ಸೇರಿ ಹಲವಾರು ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net