ಮೈಸೂರು: ತಾಲೂಕಿನ ಇಲವಾಲದಲ್ಲಿ ಮನೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 24 ಲಕ್ಷ ರೂ. ವೌಲ್ಯದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮಾಲೀಕರಾದ ರೇಣುಕಮ್ಮ ಅವರು ಪುತ್ರನೊಂದಿಗೆ ಕಳೆದ ವಾರದ ಮನೆ ಬೀಗ ಹಾಕಿ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದು, ಗುರುವಾರ ಬೆಳಗ್ಗೆ ವಾಪಸ್ ಬಂದಾಗ ವಿಷಯ ಗೊತ್ತಾಗಿದೆ. ಕೊಠಡಿ ಬೀರುವಿನಲ್ಲಿ ಇದ್ದ 250 ಗ್ರಾಂ ಚಿನ್ನಾಭರಣ, ಒಂದು ಕಾಲು ಕೆಜಿ ಬೆಳ್ಳಿ ಪದಾರ್ಥ ಮತ್ತು 3 ಲಕ್ಷ ರೂ. ನಗದು ಕಳವಾಗಿದೆ ಎಂದು ಇಲವಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.