ಕೈಗಾರಿಕಾಭಿವೃದ್ಧಿ ಆತಂಕ ಬೇಡ

Industrial Development in Srinivgasapura Taluku . MLA G.K. Venakatashivareddy
18 KLR 05
Srivivasapura Constiance MLA G.K. VenakataShivareddy
Published on

ಶಾಸಕ ವೆಂಕಟಶಿವಾರೆಡ್ಡಿ ಸ್ಪಷ್ಟನೆ - ಸ್ಥಳಿಯರಿಗೆ ಉದ್ಯೋಗ ಕಲ್ಪಿಸಲು ಕ್ರಮ



ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯುವಕರಿಗೆ ಸ್ಥಳಿಯವಾಗಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮದನಪಲ್ಲಿ ರಸ್ತೆ ಮತ್ತು ಮುಳಬಾಗಿಲು ರಸ್ತೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಕೈಗಾರಿಕಾಭಿವೃದ್ಧಿ ಯೋಜನೆ ಕುರಿತು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ನಡೆಸುತ್ತಿದ್ದು, ನಾಗರಿಕರ್ಯಾರೂ ಇದಕ್ಕೆ ಕಿವಿಕೊಡಬಾರದು ಎಂದು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ನಗರದ ಪ್ರವಾಸಿಮಂದಿರಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಿವಾಸಪುರ ತಾಲೂಕು ಬಯಲು ಸೀಮೆಯ ಭಾಗವಾಗಿದ್ದು, ಶೇ.90 ಜನ ಮಳೆಯಾಧಾರಿತ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದೆ ರೈತರು ಸ್ವಾಭಿಮಾನದ ಬದುಕಿಗಾಗಿ ಕೊಳವೆಬಾವಿ ಕೊರೆಸಿಕೊಂಡು ಬದುಕು ಕಟ್ಟಿಕೊಳ್ಳುವುದಕ್ಕೆ ಹೋರಾಡುತ್ತಿದ್ದಾರೆ. ಆದರೂ ಯಾವ ಸರ್ಕಾರಗಳೂ ಈ ಭಾಗದ ಜನರ ಜೀವನಮಟ್ಟ ಸುಧಾರಿಸಲು ಯಾವ ಪ್ರಯತ್ನಗಳನ್ನೂ ಮಾಡಲಿಲ್ಲ ಎಂದರು. ಸ್ಥಳಿಯವಾಗಿ ಉದ್ಯೋಗಾವಕಾಶಗಳಿಲ್ಲದೆ ಈ ಭಾಗದ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಚೆನ್ನೆ$, ಹೈದರಾಬಾದ್​ ಮತ್ತು ಮುಂಬೈನಂತಹ ಮಹಾ ನಗರಗಳತ್ತ ಹೋಗುತ್ತಿದ್ದಾರೆ. ಇದರಿಂದ ಬಹುತೇಕ ಗ್ರಾಮಗಳು ವೃದ್ಧಾಶ್ರಮಗಳಾಗಿ ಪರಿವರ್ತನೆ ಗೊಳ್ಳುತ್ತಿವೆ. ಅಲ್ಲದೇ ದಿನೇದಿನೆ ಕೃಷಿ ಚಟುವಟಿಕೆ ವ್ಯಾಪ್ತಿ ಸಹ ಣಿಸುತ್ತಿದ್ದು, ಈ ಎಲ್ಲವಕ್ಕೂ ಪರಿಹಾರವಾಗಿ ಸ್ಥಳಿಯವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶಾಶ್ವತ ನೀರಾವರಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಒತ್ತು ನೀಡಿ ಕೆ.ಸಿ.ವ್ಯಾಲಿ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಗಳು ಕಾಯೋರ್ನ್ಮುಖವಾಗಿ ಕೆಲ ಸುಧಾರಣೆಗಳೊಂದಿಗೆ ಮುಂದುವರಿಯುವ ಪ್ರಯತ್ನಗಳು ನಡೆಯುತ್ತಿವೆ. ಜತೆಗೆ ಕೈಗಾರಿಕಾಭಿವೃದ್ಧಿಗೆ ಕ್ರಮವಹಿಸಲಾಗುತ್ತಿದೆ. ಆದರೂ ಕೆಲವರು ಈ ಬಗ್ಗೆ ನಾಗರಿಕರಿಗೆ ತಪು$್ಪ ಮಾಹಿತಿ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಮೀನು ಸ್ವಾಧಿನಕ್ಕೆ ಪ್ರಾಥಮಿಕ ನೋಟಿಫಿಕೇಷನ್​
ಶ್ರೀನಿವಾಸಪುರದ ಮುಳಬಾಗಿಲು ರಸ್ತೆಯಲ್ಲಿ 2,000 ಎಕರೆ ಹಾಗೂ ಲಕ್ಷಿ$್ಮಪುರ&ಮದನಪಲ್ಲಿ ರಸ್ತೆಯಲ್ಲಿ 3,000 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸುವ ಗುರಿ ಇಟ್ಟುಕೊಂಡಿದ್ದು, ಈಗಾಗಲೇ ಮುಳಬಾಗಿಲು ಶ್ರೀನಿವಾಸಪುರ ರಸ್ತೆ ಎದುರೂರು ಗ್ರಾಮದ ಆಸುಪಾಸಿನಲ್ಲಿ 2,000 ಎಕರೆ ಕೈಗಾರಿಕಾ ಅಭಿವೃದ್ಧಿಗೆ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅನುಮೋದನೆ ನೀಡಿದೆ. ಅಲ್ಲದೇ ಜಮೀನು ಸ್ವಾಧಿನ ಪ್ರಕ್ರಿಯೆಗಾಗಿ ಪ್ರಾಥಮಿಕ ನೋಟಿಫಿಕೇಷನ್​ ಹೊರಡಿಸಿದೆ. ಕೈಗಾರಿಕೆಗಳಿಗಾಗಿ ಜಮೀನು ಸ್ವಾಧಿನ ಪಡಿಸಿಕೊಳ್ಳುವ ವಿಚಾರವಾಗಿ ಆ ಭಾಗದ ದೊಡ್ಡ ಜಮೀನ್ದಾರರು ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರೈತರಲ್ಲಿ ಕೆಲ ಆತಂಕಗಳನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೈಗಾರಿಕಾರಾಭಿವೃದ್ಧಿಯಿಂದ ಸ್ಥಳಿಯ ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳು ದೊರೆಯುತ್ತವೆ, ಉದ್ಯೋಗಾವಕಾಶ ದೊರೆತರೆ ಜೀವನಮಟ್ಟವೂ ಸುಧಾರಿಸಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ
ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಜಮೀನು ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೆ ಯಾವುದೇ ಒತ್ತಾಯ ಹಾಗೂ ಏಕಮುಖವಾಗಿರುವುದಿಲ್ಲ. ಈಗ ಆಗಿರುವುದು ಪ್ರಾಥಮಿಕ ನೋಟಿಫಿಕೇಷನ್​ ಅಷ್ಟೇ. ಮುಂದಿನ ಪ್ರಕ್ರಿಯೆಗಳು ನಡೆಯುವುದಕ್ಕೆ ಮೊದಲು ಸಂಬಂಧ ಪಟ್ಟ ಇಲಾಖೆ
ಅಧಿಕಾರಿಗಳು ಈ ಭಾಗದಲ್ಲಿ ಖುದ್ದಾಗಿ ಬಂದು ಮಹಜರು ಮಾಡಿ, ರೈತರು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ, ಅಹವಾಲುಗಳನ್ನು ಸ್ವೀಕರಿಸಿಯೇ ಮುಂದಿನ ಪ್ರಕ್ರಿಯೆ ಕೈಗೊಳ್ಳುತ್ತಾರೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಸ್ಪಷ್ಟಪಡಿಸಿದರು. ಕೈಗಾರಿಕಾ ಪ್ರದೇಶಗಳು ಸ್ಥಾಪನೆಯಾಗಿ ಅಭಿವೃದ್ಧಿ ಆಗುವುದರಿಂದ ರೈತರಿಗೆ ಹಾಗೂ ರೈತ ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಅಲ್ಲದೆ ಕೃಷಿ ಪದಾರ್ಥಗಳಿಗೆ ಸ್ಥಳಿಯ ಮಾರುಕಟ್ಟೆ ಲಭಿಸುತ್ತದೆ. ಹಾಗಾಗಿ ಕೈಗಾರಿಕಾಭಿವೃದ್ಧಿ ಸಂಬಂಧ ಯಾರೂ ಮಧ್ಯವರ್ತಿಗಳ ಅಪಪ್ರಚಾರಕ್ಕೆ ಕಿವಿಕೊಡಬಾರದು ಎಂದು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net