

ಚಿತ್ರದುರ್ಗ: ನಗರದ ಹೊರವಲಯ ಗಾರೇಹಟ್ಟಿಯ 200 ಮನೆಗಳಿಗೆ ಶಾಂತಿ ಸಾಗರದಿಂದ ಕುಡಿಯುವ ನೀರಿನ ಪೂರೈಕೆ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಜಯಲಕ್ಷ್ಮೀ ಬಡಾವಣೆಯಲ್ಲಿ ಶನಿವಾರ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಮನೆ, ಮನೆಗೆ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿ ಮಾತನಾಡಿ, ನೀರಿನ ಮಹತ್ವ ಅರಿತು, ಮಿತವಾಗಿ ಬಳಸಿಕೊಳ್ಳಬೇಕು, ವ್ಯರ್ಥ ಮಾಡಬಾರದು ಎಂದರು.
ಅಂದಾಜು 12 ಲಕ್ಷ ರೂ. ವೆಚ್ಚದಲ್ಲಿ ಗಾರೇಹಟ್ಟಿ ಜನರಿಗೆ ಶಾಂತಿ ಸಾಗರದಿಂದ ಕುಡಿಯುವ ನೀರು ಒದಗಿಸಲಾಗಿದೆ. ಪ್ರತಿ ಮನೆಗೆ ನೀರಿನ ಸಂಪರ್ಕ ನೀಡಲಾಗಿದೆ. ಕುಡಿಯುವ ನೀರು ಶುದ್ಧ್ದವಾಗಿದ್ದರೆ ಜನರ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಸ್ವಲ್ಪ ಸಮಯಾವಕಾಶ ಕೊಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇನೆ ಎಂದು ಗಾರೆಹಟ್ಟಿ ನಿವಾಸಿಗಳಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.
ಗಾರೇಹಟ್ಟಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಬಾಕಿ ಇರುವ ರಸ್ತೆಗಳನ್ನು 1.13 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಶೀಘ್ರದಲ್ಲೇ ಕಾಮಗಾರಿ
ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ನಗರಸಭೆ ಆಯುಕ್ತ ಸತೀಶ್‌ರೆಡ್ಡಿ, ಸದಸ್ಯ ಜಯಣ್ಣ, ಇಂಜಿನಿಯರ್ ಕಿರಣ್‌ಕುಮಾರ್, ಮುಖಂಡರಾದ ಸುರೇಶ್‌ಬಾಬು, ಶಂಕರಮೂರ್ತಿ, ಪ್ರಕಾಶ್, ಮಂಜಣ್ಣ ಇತರರು ಇದ್ದರು.