ರಜೆ ದಿನಗಳಲ್ಲಿ ಸಮಯ ವ್ಯರ್ಥ ಸಲ್ಲ

h27-sibira
Published on

ಹುಬ್ಬಳ್ಳಿ: ನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಇತ್ತೀಚೆಗೆ ಬೇಸಿಗೆ ಶಿಬಿರ ಏರ್ಪಡಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ ಉದ್ಘಾಟಿಸಿ ಮಾತನಾಡಿ, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ಲೋಕ, ಭಜನೆ, ಆಟ, ಕೈಬರಹ, ನೃತ್ಯ ಕಲೆ ಹೇಳಿಕೊಡಲಾಗುತ್ತಿದೆ. ರಜೆ ದಿನಗಳಲ್ಲಿ ಸಮಯ ವ್ಯರ್ಥ ಮಾಡದೇ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಈ ಶಿಬಿರದಲ್ಲಿ 5ರಿಂದ 15 ವಯಸ್ಸಿನ ಮಕ್ಕಳು ಭಾಗವಹಿಸಿದ್ದರು.
ಭಾಗ್ಯವತಿ ಭತೂಲಾ, ಶೋಭಾ ಯಾವಗಲ್, ರಾಜೇಶ್ವರಿ ವೆರ್ಣೇಕರ, ದೀಪಾ ಪತ್ರಾವಳಿ, ಪೂಮಾ ದೇವಳೆ, ಪೂರ್ಣಿಮಾ ಹನುಮಸಾಗರ, ಅರ್ಚನಾ ಕಲಾಲ, ರಂಜಿತಾ, ಕಾಂಚನಮಾಲಾ, ಚಂದ್ರಿಕಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net