ಮನೋರಂಜನೆಗಾಗಿ ಲ್ಯಾಪ್‌ಟಾಪ್ ಬಳಸದಿರಿ

26 HANUR 3
Published on

ಹನೂರು: ಶಿಕ್ಷಣ ಇಲಾಖೆ ವತಿಯಿಂದ ಜ್ಞಾನದೀಪ್ತಿ ಯೋಜನೆಯಡಿ ಪಟ್ಟಣದ ಜಿ.ವಿ.ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಗಳಿಗೆ ಶಾಸಕ ಆರ್.ನರೇಂದ್ರ ಲ್ಯಾಪ್‌ಟಾಪ್ ಅನ್ನು ಬುಧವಾರ ಉಚಿತವಾಗಿ ವಿತರಿಸಿದರು.

ನಂತರ ಮಾತನಾಡಿ, ಲ್ಯಾಪ್‌ಟಾಪ್‌ನಿಂದ ಶಿಕ್ಷಣ ಸಂಬಂಧ ಮಾಹಿತಿ ಪಡೆಯಬೇಕೆ ಹೊರತು ಮನೋರಂಜನೆಗಾಗಿ ಬಳಸಬಾರದು ಎಂದರು.
ಪ್ರಾಂಶುಪಾಲ ಸುಂದರಮೂರ್ತಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದಿರುವ 136 ವಿದ್ಯಾರ್ಥಿಗಳ ಪೈಕಿ 124 ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ಶೈಲೇಶ್‌ಕುಮಾರ್, ಶಾಂತರಾಜು, ಮನೋಜ್, ವಾಣಿ, ಕೃಪಾ, ಸಂವಹನ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಯಶವಂತ್, ಗ್ರಂಥಪಾಲಕ ಸುರೇಂದ್ರಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net