

ರಬಕವಿ/ಬನಹಟ್ಟಿ: ಮಕ್ಕಳನ್ನು ಕೇವಲ ಅಂಕಗಳಿಸುವ ಯಂತ್ರವನ್ನಾಗಿಸದೇ ಬದುಕು ರೂಪಿಸಿಕೊಳ್ಳುವ ಬುದ್ಧಿವಂತರನ್ನಾಗಿಸಿರಿ ಎಂದು ಬೆಳಗಾವಿ ಕೆಎಲ್‌ಇ ಸಂಸ್ಥೆಯ ವಿಜ್ಞಾನ ಶಿಕ್ಷಕಿ ಹಾಗೂ ರಾಷ್ಟ್ರೀಯ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಸ್ವಪ್ನಾ ಅನಿಗೋಳ ಹೇಳಿದರು.
ರಬಕವಿಯ ಹೊಸೂರ ಪದ್ಮಾವತಿ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಯುಕೆಜಿ ವಿಭಾಗದ ಘಟಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿ ನೀಡಿದರೆ ಮಾತ್ರ ಅವರ ಮುಂದಿನ ಭವಿಷ್ಯ ಉತ್ತಮವಾಗಿ ರೂಪಗೊಳ್ಳಲು ಸಾಧ್ಯ ಎಂದರು.
ಪ್ರಾಚಾರ್ಯ ಬಸವರಾಜ ಕಲಾದಗಿ, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ಸುಶಿಲಾ ಬಡಿಗೇರ ಮಾತನಾಡಿದರು.
ಸಮೃದ್ಧಿ ಸವದಿ, ಧೀರಜ ಕುದುರಿಮನಿ, ಶಿಕ್ಷಕಿಯರಾದ ಅಪ್ರೀನಾ ದಲಾಯತ, ಶೃತಿ ರಂಗಪ್ಪನವರ ಮತ್ತಿತರರಿದ್ದರು.