ಶರೀರ, ಅಧಿಕಾರ ನಂಬಿ ಕೆಡಬೇಡಿ

dhp 11-1 tottila
ಬಸವನಬಾಗೇವಾಡಿ ತಾಲೂಕಿನ ಸುಕ್ಷೇತ್ರ ಶ್ರೀಗುರು ಆರೂಢರ ಐಕ್ಯಕ್ಷೇತ್ರ ಆರೂಢನಂದಿಹಾಳದಲ್ಲಿ ಶ್ರೀ ಆರೂಢರ 117ನೇ ಜಯಂತಿ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು.
Published on

ಹೂವಿನಹಿಪ್ಪರಗಿ: ಶರೀರ ರಕ್ಷಣೆಗಿಂತ ನಿಜವಾದ ಜ್ಞಾನ ಮುಖ್ಯ. ಹೀಗಾಗಿ ಶರೀರ ಹಾಗೂ ಅಧಿಕಾರ ನಂಬಿ ಕೆಡಬೇಡಿ ಎಂದು ಶ್ರೀಗುರು ಆರೂಢ ದೇವಸ್ಥಾನ ಕಮಿಟಿ ಅಧ್ಯಕ್ಷ ಶ್ರೀಶೈಲ ಕನ್ನೂರ ಅಭಿಪ್ರಾಯಪಟ್ಟರು.

ಬಸವನಬಾಗೇವಾಡಿ ತಾಲೂಕಿನ ಸುಕ್ಷೇತ್ರ ಶ್ರೀಗುರು ಆರೂಢರ ಐಕ್ಯಕ್ಷೇತ್ರ ಆರೂಢ ನಂದಿಹಾಳದಲ್ಲಿ ಸಕಲ ದೇವರ ರೂಪವೇ ತಾನಾಗಿ ಅವತರಿಸಿದ ಹುಬ್ಬಳ್ಳಿ ಸಿದ್ದಾರೂಢರ ಎರಡನೇ ಅವತಾರವೆಂದೇ ಖ್ಯಾತರಾದ ಶ್ರೀ ಗುರು ಆರೂಢರ 117ನೇ ಜಯಂತ್ಯುತ್ಸವ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1908ರಲ್ಲಿ ಪುಟ್ಟ ಗ್ರಾಮದಲ್ಲಿ ಲೋಕದ ಉದ್ಧಾರಕ್ಕಾಗಿ ಉದಯಿಸಿದ ಶ್ರೀಗುರು ಆರೂಢರು ಭಕ್ತರ ಕಾಮಧೇನು ಆಗಿದ್ದಾರೆ. ವರುಣ ದೇವ, ಉದ್ಧಾದಕ ಮುನಿ, ಅಷ್ಟಾಚಕ್ರ ಸೇರಿ ಅನೇಕ ಶರಣರ ಕಥೆಗಳ ಮೂಲಕ ಆರೂಢರ ಗುಣಗಾನ ಮಾಡಿದರು. ಗರ್ಭಿಣಿಯರು ಆರೂಢರ ಗ್ರಂಥ ಓದಿದ್ದಲ್ಲಿ ಉತ್ತಮ ಸಂಸ್ಕಾರಯುತ ಮಕ್ಕಳು ಜನಿಸಲು ಸಾಧ್ಯ ಎಂದರು.

ಜಯಂತಿ ನಿಮಿತ್ತ ಶ್ರೀಗುರು ಆರೂಢರ ಐಕ್ಯಮಂಟಪ ಹಾಗೂ ತೊಟ್ಟಿಲನ್ನು ಹೂಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ನಂತರ ಮಹಿಳೆಯರು ಜೋಗುಳ ಪದ ಹಾಡಿ ಬಾಲ ಆರೂಢನ ತೋಟಿಲೋತ್ಸವ ನೆರವೇರಿಸಿದರು.

ಬಮ್ಮಯ್ಯ ಹಿರೇಮಠ, ಬಸಯ್ಯ ಹಿರೇಮಠ, ಗುರುನಾಥ ಸಜ್ಜನ, ಶಾಂತು ಕನ್ನೂರ, ನಿಂಗಪ್ಪ ಮದರಿ, ರಾಚಪ್ಪ ಕನ್ನೂರ, ಬಸಲಿಂಗಮ್ಮ, ಶಾಂತಾಬಾಯಿ, ವನಜಾಕ್ಷಿ, ಮೈತ್ರಾ, ಸಚಿನ್- ಸೌಜನ್ಯ, ಶೃತಿ, ಸಂಗಮ್ಮ ಇತರರಿದ್ದರು.

ಗ್ರಾಮ ಸೇರಿ ವಿಜಯಪುರ, ತುಂಬಗಿ, ಕಣಕಾಲ, ಸಮೀರವಾಡಿ ಭಕ್ತರು ಆಗಮಿಸಿ ದರ್ಶನ ಪಡೆದರು.

ಶ್ರೀಗುರು ಆರೂಢರ 56 ಅಧ್ಯಾಯಗಳ ಗ್ರಂಥ ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ಗ್ರಂಥ ಪಾರಾಯಣದಿಂದ ಪುಣ್ಯ ಪ್ರಾಪ್ತಿ ಆಗಲಿದೆ.

| ಶ್ರೀಶೈಲ ಕನ್ನೂರ, ಅಧ್ಯಕ್ಷರು, ಶ್ರೀಗುರು ಆರೂಢ ದೇವಸ್ಥಾನ ಕಮಿಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net