ವೈಯಕ್ತಿಕ ವಿಚಾರ ಬಿಟ್ಟು, ಅಭಿವೃದ್ಧಿಗೆ ಸಹಕರಿಸಿ

2
ಕೋಲಾರ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಎಂಎಲ್ಸಿ ನಸೀರ್​ ಅಹ್ಮದ್​ ಮಾತನಾಡಿದರು. ಅಧ್ಯಕ್ಷೆ ಲಕ್ಷಿ$್ಮದೇವಮ್ಮ ರಮೇಶ್​, ಉಪಾಧ್ಯಕ್ಷೆ ಸಂಗೀತಾ ಜಗದೀಶ್​, ಶಾಸಕ ಕೊತ್ತೂರು ಮಂಜುನಾಥ್​, ಎಂಎಲ್​ಸಿ ಅನಿಲ್​ ಕುಮಾರ್​ ಇದ್ದರು.
Published on

ಕೋಲಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಎಂಎಲ್ಸಿ ನಸೀರ್​ ಅಹ್ಮದ್​ ಕಿವಿಮಾತು

ಕೋಲಾರ: ನಗರಸಭೆ ಸದಸ್ಯರು ಸಭೆಗಳಲ್ಲಿ ವೈಯಕ್ತಿಕ ವಿಚಾರ ಇಟ್ಟುಕೊಂಡು ಆರೋಪ ಮತ್ತು ಪ್ರತ್ಯಾರೋಪ ಮಾಡೋದು ಬಿಟ್ಟು ನಗರದ ಅಭಿವೃದ್ಧಿಗೆ ಪಕ್ಷಾತಿತವಾಗಿ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ

ಎಂಎಲ್ಸಿ ನಸೀರ್​ ಅಹ್ಮದ್​ ಹೇಳಿದರು.

ನಗರಸಭೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನಗರದ ಅಭಿವೃದ್ಧಿ ವಿಚಾರವಾಗಿ ನಿಮ್ಮಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಇರುತ್ತದೆ. ಎಷ್ಟೇ ವ್ಯತ್ಯಾಸಗಳು ಇದ್ದರೂ, ಸರಿಪಡಿಸಿಕೊಂಡು ಹೋಗಬೇಕು ಎಂದರು.

ನಗರಸಭೆ ಸದಸ್ಯ ಮುಬಾರಖ್​ ಮಾತನಾಡಿ, ಕೋಲಾರಕ್ಕೆ ಕುಡಿಯುವ ನೀರಿಗಾಗಿ ಯರಗೋಳ್​ ಯೋಜನೆಯಲ್ಲಿ ನಗರಸಭೆಯಿಂದ ಅನುದಾನ ವಿನಿಯೋಗಿಸಿ ಕಾಮಗಾರಿ ಅನುಷ್ಠಾನಕ್ಕೆ ತರಲಾಗಿದೆ. ಓವರ್​ ಟ್ಯಾಂಕ್​ ನಿಮಾರ್ಣವಾಗಿ ಸಮರ್ಪಕ ಬಳಕೆಯಾಗುತ್ತಿಲ್ಲ. ಹಣ ಮಾತ್ರ ವರ್ಷದಿಂದ ವರ್ಷಕ್ಕೆ ಟೆಂಡರ್​ ಹಣ ಏರಿಕೆಯಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಸದಸ್ಯರು ಧ್ವನಿಗೂಡಿಸಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಯರಗೋಳ್​ ಯೋಜನೆಯ ಬಳಕೆ ನಿರ್ವಹಣೆ ಸೇರಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲು ಶಾಸಕ ಕೊತ್ತೂರು ಮಂಜುನಾಥ್​

ಮತ್ತು ಎಂಎಲ್​ಸಿ ಅನಿಲ್​ಕುಮಾರ್​ ತಿಳಿಸಿದರು.

ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಜನನ&ಮರಣ ಪ್ರಮಾಣ ಪತ್ರ ವಿತರಣೆ ಮಾಡುತ್ತಿದ್ದ ಸಿಬ್ಬಂದಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂದು ಲಿಖಿತ ರೂಪದಲ್ಲಿ ಶಾಸಕ ಕೊತ್ತೂರು ಮಂಜುನಾಥ್​ ಅವರಿಗೆ ದೂರು ಸಲ್ಲಿಸಿದ್ದರು. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಪೌರಾಯುಕ್ತರಿಗೆ ನಸೀರ್​ ಅಹ್ಮದ್​ ಸೂಚಿಸಿದರು. ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ವಿಷಯ ಪ್ರಸ್ತಾಪಿಸಿತ್ತಿದ್ದಂತೆ ಸದಸ್ಯ ರಾಕೇಶ್​ ಮಾತನಾಡಿ, ಈಗಾಗಲೇ ನಗರಸಭೆ ವ್ಯಾಪ್ತಿಗೆ ಕೆಲವು ಹಳ್ಳಿಗಳನ್ನು ಸೇರಿಸಿಕೊಂಡು ವರ್ಷಗಳೇ ಕಳೆದಿದೆ. ಆದರೆ ನಗರಸಭೆ ವಶಕ್ಕೆ ದಾಖಲೆಗಳು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಮೊದಲು 5 ಕಿ.ಮಿ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶದಲ್ಲಿರುವ ಎಲ್ಲ ಖಾತೆಗಳನ್ನು ಪಂಚಾಯಿತಿಯಿಂದ ನಗರಸಭೆ ವಶಕ್ಕೆ ಪಡೆದುಕೊಳ್ಳುವಂತೆ ಸೂಚಿಸಿದರು.

ಪೌರಾಯುಕ್ತ ಪ್ರಸಾದ್​ಗೆ ಶಾಸಕ ಕೊತ್ತೂರು ಎಚ್ಚರಿಕೆ

ನಗರಸಭೆಯ ಸಾಮಾನ್ಯ ಸಭೆ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಒಳಗಡೆ ಬಂದರೆ ಹೇಗೆ ಸಭೆ ನಡೆಯುತ್ತದೆ. ಸಭೆ ನಡೆಯುವಾಗ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಅಷ್ಟೇ ಇರಬೇಕು ಎಂದು ಎಷ್ಟು ಬಾರಿ ಹೇಳಿದರೂ ನೀವು ಕೇಳಲ್ಲ, ಇದು ನಿಮಗೆ ಕೊನೇ ವಾರ್ನಿಂಗ್​, ಮುಂದಿನ ಸಭೆಗಳಲ್ಲಿ ಇದು ಮುಂದುವರೆಯಬಾರದು ಎಂದು ಶಾಸಕ ಕೊತ್ತೂರು ಮಂಜುನಾಥ್​ ಪೌರಾಯುಕ್ತರಿಗೆ ಎಚ್ಚರಿಕೆ ನೀಡಿದರು.

ಸ್ಥಾಯಿ ಸಮಿತಿ ರಚನೆ ಗದ್ದಲ

ನಗರಸಭೆ ಸ್ಥಾಯಿ ಸಮಿತಿ ರಚನೆ ವಿಷಯವಾಗಿ ಬಾರಿ ಗದ್ದಲ ಉಂಟಾಯಿತು. ಅವಿರೋಧವಾಗಿ ಸ್ಥಾಯಿ ಸಮಿತಿ ರಚನೆಗೆ ಸಹಮತ ಸಿಗದ ಹಿನ್ನೆಲೆ ಚುನಾವಣೆ ಮೂಲಕ ರಚನೆಗೆ ಮುಂದಾಗಬೇಕಾಯಿತು. ಸಭೆಯಲ್ಲಿ ಅಧ್ಯಕ್ಷೆ ಲಕ್ಷಿ$್ಮದೇವಮ್ಮ ಮುಂದಿನ ಸಭೆಯಲ್ಲಿ ಸ್ಥಾಯಿ ಸಮಿತಿ ವಿಷಯ ನಡೆಸೋಣ ಎಂದಾಗ ಮಧ್ಯೆ ಪ್ರವೇಶಿಸಿದ ಸದಸ್ಯರು ಬಹುಮತದ ಆಧಾರದಲ್ಲಿ ಸಭೆಯ ತೀಮಾರ್ನ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ನಸೀರ್​ ಅಹ್ಮದ್​, ಕೊತ್ತೂರು ಮಂಜುನಾಥ್​, ಅನಿಲ್​ ಕುಮಾರ್​, ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲಿ ಎಂದು ಸಭೆಯಿಂದ ಹೊರನಡೆದರು. ಸಂಜೆ ಸ್ಥಾಯಿ ಸಮಿತಿ ರಚನೆ ವಿಚಾರವಾಗಿ ಚುನಾವಣೆ ಪ್ರಕ್ರಿಯೆಯನ್ನು ಪೌರಾಯುಕ್ತ ಪ್ರಸಾದ್​ ಬಾಬು ಪ್ರಾರಂಭಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net