

ದೇವನಹಳ್ಳಿ: ದೇಶದಲ್ಲಿ ಹೆಚ್ಚುತ್ತಿರುವ ಬಡತನ ಬಾಲ ಕಾರ್ಮಿಕ ಪದ್ಧತಿಗೆ ಮುಖ್ಯ ಕಾರಣವಾಗಿದೆ ಎಂದು ದೇವನಹಳ್ಳಿ ಪುರಸಭೆ ಉಪಾಧ್ಯಕ್ಷ ಜಿ.ಎ.ರವೀಂದ್ರ ತಿಳಿಸಿದರು.
ಪುರಸಭಾ ಆವರಣದಲ್ಲಿ ಗುರುವಾರ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ದ ಪ್ರಮಾಣವಚನ ಬೋಧನೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಭವಿಷ್ಯ ರೂಪಿಸಲು ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳ ಬಾಲ್ಯ ಹಾಗೂ ಶಿಕ್ಷಣದ ಹಕ್ಕನ್ನು ಪಾಲಕರು ಕಸಿಯಬಾರದು. ಸಾರ್ವಜನಿಕ ೇತ್ರದಲ್ಲಿ ಬಾಲಕಾರ್ಮಿಕರ ಬಗ್ಗೆ ಅರಿವು ಮೂಡಿಸಬೇಕು. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲ ಕಾರ್ಮಿಕರು ಕಂಡುಬಂದಲ್ಲಿ ತಕ್ಷಣ 1098ಕ್ಕೆ ಕರೆ ಮಾಡಿ ತಿಳಿಸಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಸಿ.ದೊಡ್ಡಮಲವಯ್ಯ ಮಾತನಾಡಿ, ನಮ್ಮ ದೇಶ ಬಾಲ ಕಾರ್ಮಿಕ ಮುಕ್ತವಾಗಬೇಕಾದರೆ ಸಾರ್ವಜನಿಕರ ಸಹಕಾರದ ಜತೆಗೆ ಪೌರಕಾರ್ಮಿಕರ ಸಹಕಾರವೂ ಅಗತ್ಯ. ಹೋಟೆಲ್, ಬೇಕರಿ, ಟೀ ಅಂಗಡಿ, ಸಣ್ಣ ಉದ್ದಿಮೆಗಳಲ್ಲಿ 14 ವರ್ಷ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಂದ ದುಡಿಸಿಕೊಳ್ಳುವುದು ಕಂಡು ಬಂದರೆ ನೀವು ಕಾರ್ಮಿಕ ಇಲಾಖೆಗಾಗಲಿ ನಮಗಾಗಲಿ ಮಾಹಿತಿ ನೀಡಿದರೆ ಕ್ರಮ ವಹಿಸಲಾಗುವುದು ಎಂದರು.
ಸಮುದಾಯ ಸಂಟನಾ ಅಧಿಕಾರಿ ಬೈರಪ್ಪ ಅವರು ಪೌರಕಾರ್ಮಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪುರಸಭೆ ಸದಸ್ಯರಾದ ಗೀತಾಶ್ರೀಧರಮೂರ್ತಿ, ಪೌರಕಾರ್ಮಿಕರ ಸಂದ ಅಧ್ಯಕ್ಷ ಮಂಜಪ್ಪ, ಕಂದಾಯ ಅಧಿಕಾರಿ ಶಿವಮೂರ್ತಿ, ಮ್ಯಾನೇಜರ್ ಸರಸ್ವತಿ, ಚಂದ್ರಶೇಖರ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಅಧಿಕಾರಿಗಳಾದ ಶ್ರೀನಿವಾಸ್, ಮಂಜುನಾಥ್, ಕೃಷ್ಣಪ್ಪ ಇದ್ದರು.
.