ಮನಃಶಾಂತಿಗೆ ಲಕ್ಷಾಂತರ ರೂ. ವೆಚ್ಚ ಮಾಡದಿರಿ

16-msk-1
ಮಸ್ಕಿಯ ಗಚ್ಚಿನ ಹಿರೇಮಠದಲ್ಲಿ ರೇಣುಕಾಚಾರ್ಯ ಜಯಂತಿ ಅಂಗವಾಗಿ ಆಯೋಜಸಿದ್ದ ಜನ ಜಾಗೃತಿ ಧಾರ್ಮಿಕ ಸಭೆಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಶ್ರೀಷ.ಭ್ರಮ್ಮ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೋಮನಾಥ ಶಿವಾಚಾರ್ಯರು, ವರರುದ್ರಮುನಿ ಶಿವಾಚಾರ್ಯರು, ವೆಂಕಟಗಿರಿ ಕ್ಯಾಂಪ್‌ನ ಸಿದ್ದಾಶ್ರಮದ ಸಿದ್ದರಾಮೇಶ್ವರ ಶರಣರು, ಅನ್ನದಾನೇಶ್ವರ ಶಾಸ್ರ್ತೀಗಳು ಇದ್ದರು.
Published on

ಮಸ್ಕಿ: ಆಧುನಿಕ ಕಾಲಘಟ್ಟದಲ್ಲಿ ಮನುಷ್ಯ ಒತ್ತಡದ ಜೀವನ ನಡೆಸುತ್ತಿದ್ದಾನೆ. ಧಾವಂತದಿಂದ ಜೀವನ ನಡೆಸಿ ಸಾಧಿಸುವಂತದ್ದು ಏನೂ ಇಲ್ಲ. ಪ್ರತಿಯೊಬ್ಬರೂ ಧರ್ಮದ ತಳಹದಿಯ ಮೇಲೆ ಜೀವನ ನಡೆಸುವಂತಾಗಬೇಕು. ಅಂದಾಗ ಮಾತ್ರ ನೆಮ್ಮದಿ, ಶಾಂತಿ ಕಾಣಲು ಸಾಧ್ಯ ಎಂದು ಶ್ರೀ ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹಿರೂರು ಹೇಳಿದರು.

ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಬುಧವಾರ ರೇಣುಕಾಚಾರ್ಯ ಜಯಂತಿ ಆಯೋಜಸಿದ್ದ ಜನ ಜಾಗೃತಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತ ಪುಣ್ಯಭೂಮಿ. ಈ ನೆಲದಲ್ಲಿ ಜನ್ಮ ತಾಳಿದ ಪ್ರತಿಯೊಬ್ಬರೂ ಆದರ್ಶ ಪುರಷರಾಗಲು ಸಾಧ್ಯವಿದೆ. ಎಲ್ಲರೂ ಧರ್ಮದ ತಳಹದಿಯ ಮೇಲೆ ಬದಕಬೇಕು. ಈಗಿನ ಕಾಲದಲ್ಲಿ ಉಪವಾಸದಿಂದ ಇರುವವರು ಬೆರಳಿಣಿಕೆಯಷ್ಟು ಜನ ಮಾತ್ರ. ಆದರೆ ಮನಃಶಾಂತಿ ಇಲ್ಲದೆ ಶಾಂತಿಗಾಗಿ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದಾರೆ. ಶಾಂತಿಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಶಾಂತಿ ಕಂಡುಕೊಳ್ಳಬೇಕು ಎಂದರು.

ಸಿಂಧನೂರಿನ ರಂಭಾಪುರಿ ಶಾಖ ಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ವೀರಶೈವ ಧರ್ಮ ಸಕಲ ಜಾತಿ ಜನಾಂಗದವರನ್ನು ತಾಯಿ ಹೃದಯದಿಂದ ಕಂಡಿದೆ. ಜಾತಿ ಭೇದ ಮಾಡದೆ ಸಕಲರಿಗೆ ಲೇಸನ್ನೆ ಬಯಸಿದ ಧರ್ಮ ಇದಾಗಿದೆ ಎಂದರು.

ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು, ವೆಂಕಟಗಿರಿ ಕ್ಯಾಂಪ್‌ನ ಸಿದ್ದಾಶ್ರಮದ ಸಿದ್ಧರಾಮೇಶ್ವರ ಶರಣರು, ಅನ್ನದಾನೇಶ್ವರ ಶಾಸೀ ಬೆಂಗಳೂರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net