

ಬೈಲಹೊಂಗಲ: ಯುವ ಸಮುದಾಯದಲ್ಲಿ ಯಾರೂ ಯಾವುದೇ ಕಾರಣಕ್ಕೂ ಜಾತಿ, ಧರ್ಮದ ವಿಷ ಬೀಜ ಬಿತ್ತಬಾರದು. ಭಾರತೀಯರು ಎನ್ನುವ ಮನೋಭಾವ ಬೆಳೆಸಿದರೆ ಮಾತ್ರ ಭವ್ಯರಾಷ್ಟ್ರ ನಿರ್ಮಾಣದ ಕನಸು ನನಸಾಗಲು ಸಾಧ್ಯ ಎಂದು ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ನವರಾತ್ರಿ ದಸರಾ ಮಹೋತ್ಸವ ಅಂಗವಾಗಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲೂಕು ಟಕದಿಂದ ಒಂಬತ್ತು ದಿನದ ಬುಧವಾರ ಹಮ್ಮಿಕೊಂಡಿದ್ದ ಶ್ರೀದುರ್ಗಾ ಮಾತಾ ದೌಡ್ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ನಾನು, ನನ್ನದು ಎನ್ನುವುದು ಬಿಟ್ಟು ಎಲ್ಲರೂ ನಮ್ಮವರು ಎನ್ನುವ ಪರಿಕಲ್ಪನೆ ಎಲ್ಲರಲ್ಲಿ ಮೂಡಬೇಕಿದೆ. ಸನಾತನ ಹಿಂದು ಧರ್ಮದ ಸಂಸತಿ, ಸಂಸ್ಕಾರ ಎತ್ತಿ ಹಿಡಿಯೋಣ ಎಂದರು.
ವಿಶ್ವಹಿಂದು ಪರಿಷದ್ ಜಿಲ್ಲಾ ಟಕ ಅಧ್ಯ ಪ್ರಮೋದಕುಮಾರ ವಕ್ಕುಂದ ಮಾತನಾಡಿ, ದುರ್ಗಾ ಮಾತಾ ದೌಡ್ ಸಹಸ್ರಾರು ಜನರಿಂದ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ತಾಲೂಕು ಟಕ ಅಧ್ಯ ಕಾಶಿನಾಥ ಬಿರಾದಾರ ಅಧ್ಯತೆ ವಹಿಸಿದ್ದರು. ಒಂಬತ್ತನೆಯ ದಿನದ ದೌಡ್ ವಿದ್ಯಾನಗರ ಈಶ್ವರ ದೇವಸ್ಥಾನದಿಂದ ಆರಂಭವಾಗಿ ಜವಳಿ ಕೂಟ ಗ್ರಾಮದೇವಿ ದೇವಸ್ಥಾನಕ್ಕೆ ಬಂದು ತಲುಪಿತು. ಮುಖಂಡರಾದ ಶಿವಾನಂದ ಬಡ್ಡಿಮನಿ, ಮಹಾಂತೇಶ ಹೊಸೂರ, ಅಶೋಕ ಸವದತ್ತಿ, ವಿವೇಕಾನಂದ ಪೂಜೇರ, ಮಲ್ಲಿಕಾರ್ಜುನ ಏಣಗಿಮಠ, ಗಿರೀಶ ಹರಕುಣಿ, ದಯಾನಂದ ಗೆಜ್ಜಿ, ರಾಜು ಬೊಂಗಾಳೆ, ವಿಜಯ ಪತ್ತಾರ, ಮಹೇಶ ಜಾಧವ, ಮಂಜುನಾಥ ಜಾಧವ, ಬಸವರಾಜ ಈಟಿ, ಆನಂದ ಗುಂಡ್ಲೂರ, ಅಪ್ಪಾಸಾಹೇಬ ಭೋಸಲೆ, ರಾಜು ಬಡಿಗೇರ, ಸಚಿನ ಚೀಲದ ಇತರರಿದ್ದರು.
2ಬಿಎಲ್ಎಚ್1: ಬೆಲಹೊಂಗಲದಲ್ಲಿ ದುರ್ಗಾಮಾತಾ ದೌಡ್ ಆರ್ಎಸ್ಎಸ್ ಪ್ರಾರ್ಥನೆಯೊಂದಿಗೆ ಸಂಪನ್ನಗೊಂಡಿತು.